ಮಂಗಳೂರಿನವರ ಸೊಕ್ಕು ಮುರಿಯಬೇಕು,,, ಧರ್ಮಸ್ಥಳಕ್ಕೆ ಯಾಕೆ ಹೋಗ್ಬೇಕು? - ಕ್ಲಬ್ ಹೌಸ್ ನಲ್ಲಿ ಕುಡ್ಲದವರ ಕೆಣಕಿದ ಚರ್ಚೆ
Monday, June 28, 2021
ಮಂಗಳೂರು: ನಮ್ಮಲ್ಲಿ ದೇವಸ್ಥಾನಗಳು, ಮನೆ ದೇವರುಗಳಿಲ್ವೇ?, ಅದನ್ನು ಬಿಟ್ಟು ಎದ್ನೋ ಬಿದ್ನೋ ಎಂದು ನಮ್ಮವರು ಧರ್ಮಸ್ಥಳ,ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ. ಎಷ್ಟರವರೆಗೆ ಕನ್ನಡಿಗರು ಕರಾವಳಿ ಕಡೆಗೆ ಪ್ರವಾಸ ಹೋಗೋದನ್ನು ಕಡಿಮೆ ಮಾಡಲ್ವೋ ಅಲ್ಲಿಯವರೆಗೆ ಮಂಗಳೂರಿಗರ ಸೊಕ್ಕು ಮುರಿಯೋಲ್ಲ ಎಂಬ ಮಾತುಗಳು ಕ್ಲಬ್ ಹೌಸ್ ನ ಕರುನಾಡು v/s ತುಳುನಾಡು ಸಂವಾದದಲ್ಲಿ ಕೇಳಿ ಬಂದಿದೆ.
ಟಿವಿಗಳಲ್ಲಿಯೂ ಮಂಗಳೂರಿಗರು ಬಂದು ಸೇರಿಕೊಳ್ಳುತ್ತಿದ್ದಾರೆ. ಇವತ್ತು ಮಂಗಳೂರಿಗರು ಕನ್ನಡ ಟಿವಿ ಚ್ಯಾನೆಲ್ ಗಳಲ್ಲಿ ಮೆರೆಯುತ್ತಿದ್ದಾರೆ. ಯಾವಾಗ ಅನುಶ್ರೀ ಝೀಟಿವಿಗೆ ಪ್ರವೇಶ ಪಡೆದರೋ, ಅಂದಿನಿಂದ ಮಂಗಳೂರು ಕಡೆಯವರು ಬಂದು ತುಂಬುಕೊಳ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಅಲ್ಲದೆ ಮಂಜುನಾಥ ಸ್ವಾಮಿ ದೇವಸ್ಥಾನ ನಿಮ್ಮೂರಲ್ಲಿ ಕಟ್ಟಿಸ್ಕೊಳ್ಳಿ ಸರ್ ಯಾಕೆ ಕರಾವಳಿಗೆ ಹೋಗ್ತಿರಾ. ನಮ್ಮನ್ನು ಘಟ್ಟದವರು ಎಂದು ಕೀಳಾಗಿ ಕಾಣ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಮಂಗಳೂರಿಗರನ್ನು ನಿಂದನೆ ಮಾಡಲಾಗಿದೆ.
ಇತ್ತೀಚಿಗೆ ತುಳುನಾಡಿನ ಧ್ವಜವನ್ನು ಚಪ್ಪಲಿಯಲ್ಲಿ ಬಿಡಿಸಿ ವ್ಯಂಗ್ಯ ಮಾಡಿದಾತನ ಕೃತ್ಯ ನೆನಪಿನಿಂದ ಮರೆಯಾಗುವ ಮುನ್ನವೇ ಮತ್ತೆ ಈ ರೀತಿಯ ನಿಂದನಾತ್ಮಕ ದಾಳಿ ಕನ್ನಡಿಗರು ಮತ್ತು ತುಳುನಾಡಿನವರ ಮತ್ತಷ್ಟು ಮತ್ತಷ್ಟು ಬಿರುಕಿಗೆ ಕಾರಣವಾಗಲಿದೆ ಅನ್ನೋದು ಸ್ಪಷ್ಟ.