
ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಅರೆನಗ್ನ ಡಾನ್ಸ್ ವೀಡಿಯೋ ಪತ್ತೆ
ಬೆಂಗಳೂರು: ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡುವ ವೇಳೆ ಯುವತಿಯರೊಂದಿಗೆ ಅರೆನಗ್ನವಾಗಿ ಡಾನ್ಸ್ ಮಾಡುತ್ತಿರುವ ವಿಡಿಯೋ ಪತ್ತೆಯಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯೊಂದರಲ್ಲಿ ಆರೋಪಿ ರಿದಯ್ ಬಾಬು ಇಬ್ಬರು ಯುವತಿಯರೊಂದಿಗೆ ಅರೆನಗ್ನವಾಗಿ ಬಾಂಗ್ಲಾ ದೇಶಿ ಹಾಡುಗಳಿಗೆ ಡಾನ್ಸ್ ಮಾಡಿದ್ದಾನೆ. ಡಾನ್ಸ್ ಮಾಡಿರುವ ವಿಡಿಯೋವನ್ನು ಆರೋಪಿಗಳು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಆರೋಪಿ ರಿದಯ್ ಬಾಬು ಯುವತಿಯರನ್ನು ಭಾರತದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಗಡಿ ದಾಟಿ ವೇಶ್ಯವಾಟಿಕೆ ದಂಧೆಗೆ ನೂಕುತ್ತಿದ್ದ. ಇದುವರೆಗೂ ನೂರಾರು ಯುವತಿಯರನ್ನು ಭಾರತಕ್ಕೆ ಅಕ್ರಮವಾಗಿ ಕರೆ ತಂದಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.