ಅಪ್ರಾಪ್ತೆಯನ್ನು ಮದುವೆಯಾಗಿ ಅತ್ಯಾಚಾರವೆಸಗಿದ ಭೂಪ ..
Sunday, June 20, 2021
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಮದುವೆಯಾಗಿ ಅತ್ಯಾಚಾರವೆಸಗಿದ ಯುವಕನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ಕಮಲ್ ಆರೋಪಿ. ಈತ ಜೂ.11ರಂದು ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಬಲಾತ್ಕಾರವಾಗಿ ತಾಳಿ ಕಟ್ಟಿದ್ದಾನೆ.
ಬಳಿಕ ತೀರ್ಥಹಳ್ಳಿ ಪಟ್ಟಣದ ಆರಗ ರಸ್ತೆಯಲ್ಲಿ ಸುರಾನಿ ಸಮೀಪದ ಪರಿಚಯದವರ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ಪೋಷಕರು ಮತ್ತು ಬಾಲಕಿ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಪೊಲೀಸರು ಠಾಣೆಗೆ ಕರೆ ತಂದು ಬಾಲಕಿಯ ದೂರಿನ ಮೇರೆಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಕೊಂಡಿದ್ದಾರೆ.