-->
ನಟಿಯ ಮೇಲೆ ಅತ್ಯಾಚಾರ: ಮಾಜಿ ಸಚಿವ, ಎಐಎಡಿಎಂಕೆ ಮುಖಂಡನ ಬಂಧನ

ನಟಿಯ ಮೇಲೆ ಅತ್ಯಾಚಾರ: ಮಾಜಿ ಸಚಿವ, ಎಐಎಡಿಎಂಕೆ ಮುಖಂಡನ ಬಂಧನ

ಬೆಂಗಳೂರು: ತಮಿಳುನಾಡಿನ ಮಾಜಿ ಸಚಿವ, ಎಐಎಡಿಎಂಕೆ ಮುಖಂಡ ಎಂ.ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರ ತಂಡ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಲೇಷ್ಯಾ ಮೂಲದ ಮಹಿಳೆ , ನಟಿಯ ಜೊತೆ ಮಾಜಿ ಸಚಿವ, ಎಐಎಡಿಎಂಕೆ ಮುಖಂಡ ಎಂ.ಮಣಿಕಂಠನ್ ಕೆಲವು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು.  ಹಾಗೆಯೇ ಮದುವೆಯಾಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿ, ಬಲವಂತದಿಂದ ಗರ್ಭಪಾತ ಮಾಡಿಸಿರುವ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಅಡ್ಯಾರ್ ಆಲ್ ವುಮೆನ್ ಪೊಲೀಸ್ ಮಣಿಕಂಠನ್ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 313 (ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ), 323 (ಉದ್ದೇಶಪೂರ್ವಕ ಅವಮಾನ), 417(ವಂಚನೆ) ಹಾಗೂ 506(ಕ್ರಿಮಿನಲ್ ಆರೋಪ)ರ ಪ್ರಕಾರ ಪ್ರಕರಣ ದಾಖಸಿಕೊಂಡಿದ್ದಾರೆ.



Ads on article

Advertise in articles 1

advertising articles 2

Advertise under the article