ಈ ಚಾಲಾಕಿ ಡಾಕ್ಟರ್ ಮನೆಯಲ್ಲೇ ನೀಡುತ್ತಿದ್ದಳು ಕೊರೋನಾ ಲಸಿಕೆ: ಲಸಿಕೆ ಪಡೆದವರಿಗೆಲ್ಲಾ ಈಗ ಟೆನ್ಷನ್ ಶುರು
Friday, May 21, 2021
ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಕೊರೋನಾ ಲಸಿಕೆಗಳನ್ನು ತನ್ನ ಮನೆಗೆ ಒಯ್ದು ಅಲ್ಲಿ ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣ ಸಂಬಂಧ ಓರ್ವ ಯುವ ವೈದ್ಯೆ ಸಹಿತ ಮತ್ತೋರ್ವ ಸಹಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮಂಜುನಾಥ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಅಧಾರಿತ ವೈದ್ಯೆ ಡಾ. ಪುಷ್ಪಿತಾ ಮತ್ತು ಆಕೆಯ ಸಹಾಯಕಿ ಪ್ರೇಮಾ ಪೊಲೀಸರಿಂದ ಬಂಧನಕ್ಕೊಳಗಾದವರು.
ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದ ಲಸಿಕೆಗಳನ್ನು ಪುಷ್ಪಿತಾ ತನ್ನ ಮನೆಗೆ ಒಯ್ದು ಬಳಿಕ ಅಲ್ಲಿ ಒಂದು ಲಸಿಕೆಗೆ 500 ರೂ.ನಂತೆ ಮಾರುತ್ತಿದ್ದಳು. ಹೀಗೆ ಒಟ್ಟು 53 ಜನಕ್ಕೆ ವ್ಯಾಕ್ಸಿನ್ ನೀಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಆದರೆ ವ್ಯಾಕ್ಸಿನೇಷನ್ ವೇಳೆ ವಯಲ್‌ನಿಂದ ಇಂಜೆಕ್ಷನ್ ತೆಗೆದು ಹಲವು ಗಂಟೆಗಳ ಬಳಿಕ ವ್ಯಾಕ್ಸಿನ್ ನೀಡಲಾಗಿದ್ದು, ಇದು ಪ್ರಯೋಜನ ಶೂನ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಅಕ್ರಮವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಂಡವರಿಗೆ ಮತ್ತೆ ಟೆನ್ಷನ್ ಶುರುವಾಗಿದೆ.