ಸುಳ್ಯ: ಬೈಕ್ ಸ್ಕಿಡ್ ಆಯಿತೆಂದು ರಕ್ಷಣೆಗೆ ಧಾವಿಸಿ ಬಂದವರಿಗೆ ಕಾದಿತ್ತು ಅಚ್ಚರಿ: ಅಷ್ಟಕ್ಕೂ ಬೈಕ್‌ನಲ್ಲಿ ಸವಾರ ಏನನ್ನು ಸಾಗಿಸುತ್ತಿದ್ದ?
Friday, May 21, 2021
ಸುಳ್ಯ: ಚಲಿಸುತ್ತಿದ್ದ ಬೈಕೊಂದು ಸ್ಕಿಡ್ ಆಗಿ ಸವಾರ ಬಿದ್ದು ಗಾಯಗೊಂಡಿದ್ದು, ಆತನ ರಕ್ಷಣೆಗೆ ಧಾವಿಸಿದ ಊರವರಿಗೆ ಮಾತ್ರ ಅಚ್ಚರಿ ಕಾದಿತ್ತು. ಯಾಕೆಂದರೆ ಸ್ಕಿಡ್ ಆಗಿ ಬಿದ್ದ ಬೈಕಿನಿಂದ ಮದ್ಯದ ಬಾಟಲಿ, ಪ್ಯಾಕೆಟ್‌ಗಳು ಹೊರಗೆಸೆಯಲ್ಪಟ್ಟಿದ್ದವು.
ಅಷ್ಟಕ್ಕೂ ಈ ಘಟನೆ ನಡೆದಿರುವುದು ಸುಳ್ಯ ತಾಲೂಕಿನ ಹರಿಹರದ ಕೊಲ್ಲಮೊಗ್ರು ಬಳಿ.
ಇಂದು ವೇಗವಾಗಿ ಹೋಗುತ್ತಿದ್ದ ಬೈಕ್ ನಿಲ್ಕೂರು ಬಳಿ ಪಲ್ಟಿಯಾಗಿ ಬಿದ್ದಿದೆ. ಕೂಡಲೇ ಅಲ್ಲಿದ್ದವರು ಸವಾರನ ರಕ್ಷಣೆಗೆ ಆಗಮಿಸಿದ್ದರು. ಆದರೆ ಸವಾರನ ಜೊತೆಗೆ ಆತ ಸಾಗಿಸುತ್ತಿದ್ದ ಮದ್ಯದ ಬಾಟಲಿ, ಪ್ಯಾಕೆಟ್‌ಗಳು ಸಾರ್ವಜನಿಕರ ಗಮನಕ್ಕೆ ಬಂದಿದ್ದು,ಕೂಡಲೇ ಅಬಕಾರಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಅಬಕಾರಿ ಪೊಲೀಸರು ಬೈಕ್ ಮತ್ತು ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಸವಾರ ಲೋಕನಾಥ ರೈ ಪರಾರಿಯಾಗಿದ್ದಾನೆ.