-->
ಬಾಲಕಿಯ ಅಪಹರಣ: ನೆಲಮಂಗಲದಲ್ಲಿ ನರಬಲಿಗೆ ಯತ್ನ...!!

ಬಾಲಕಿಯ ಅಪಹರಣ: ನೆಲಮಂಗಲದಲ್ಲಿ ನರಬಲಿಗೆ ಯತ್ನ...!!

ನೆಲಮಂಗಲ: 10 ವರ್ಷದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಬಲಿ ನೀಡಲು ಯತ್ನಿಸಿರುವ ಅಮಾನವೀಯ ಘಟನೆ ನೆಲಮಂಗಲದಲ್ಲಿ ನಡೆದಿದೆ. 

ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಮಾಲ ಎಂಬವರ ಮಗಳನ್ನು ಅದೇ ಗ್ರಾಮದ ಸುರೇಶ್, ಹನುಮಂತಯ್ಯ, ಶಿವರಾಜು, ರವಿ, ಸೌಮ್ಯ ಸೇರಿದಂತೆ ಮಾಂತ್ರಿಕನೊಬ್ಬ ಮನೆ ಮುಂದೆ ಆಟ ಆಡುತ್ತಿದ್ದ  ಹತ್ತು ವರ್ಷದ ಬಾಲಕಿಯನ್ನು ಎಳೆದೊಯ್ದು ಹೊಲದಲ್ಲಿನ ಗುಡಿಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕನೊಬ್ಬ ಕ್ಷುದ್ರ ಪೂಜೆ ಮಾಡಿ ನಂತರ ಬಲಿ ಪೂಜೆ ನಡೆಸಲಾಗಿದೆ. ಮನೆಯ ಬಳಿ ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕಲು ಆರಂಭಿಸಿದ್ದರು

ಗುಡಿಯ ಬಳಿ ಬಾಲಕಿ ಪತ್ತೆಯಾಗಿದ್ದು, ವಾಮಾಚಾರಿಗಳಿಂದ ಬಾಲಕಿಯ ಪ್ರಾಣ ರಕ್ಷಣೆ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರಬಲಿಗೆ ಯತ್ನಿಸಿದ ಮಾಂತ್ರಿಕ ಸೇರಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


Ads on article

Advertise in articles 1

advertising articles 2

Advertise under the article