ಮೊಬೈಲ್ ನಲ್ಲಿ ಮಾತಾಡುತ್ತಾ ನರ್ಸ್ ಮಾಡಿದ್ರು ಎಡವಟ್ಟು...
Sunday, June 20, 2021
ಹೈದರಾಬಾದ್ (ತೆಲಂಗಾಣ): ಇಲ್ಲೊಬ್ಬಳು ನರ್ಸ್ ಫೋನಿನಲ್ಲಿ ಮಾತನಾಡುತ್ತಾ ಯುವತಿಯೊಬ್ಬಳಿಗೆ ಎರಡು ಬಾರಿ ಕೋವಿಡ್ ಲಸಿಕೆ ನೀಡಿ ಎಡವಟ್ಟು ಮಾಡಿದ್ದಾರೆ
ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಹಾಯತ್ನಗರದ ನಿವಾಸಿ ಲಕ್ಷ್ಮಿ ಪ್ರಸನ್ನ (21 ವರ್ಷ) ಎಂಬ ಯುವತಿ ಕಳೆದ ಗುರುವಾರ ಪೆದ್ದಂಬರ್ ಪೇಟ್ನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢ ಶಾಲೆಗೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಅಲ್ಲಿ ಕರ್ತವ್ಯದಲ್ಲಿದ್ದ ಪದ್ಮಾ ಎಂಬ ನರ್ಸ್, ಮೊಬೈಲ್ನಲ್ಲಿ ಮಾತನಾಡುತ್ತಾ ಎರಡು ಬಾರಿ ಕೋವಿಡ್ ಲಸಿಕೆ ಚುಚ್ಚಿದ್ದಾರೆ.
ತಕ್ಷಣವೇ ಯುವತಿ ಅಸ್ವಸ್ಥಳಾಗಿದ್ದು, ಎಳನೀರು ಕೊಡಲಾಗಿದೆ. ಎರಡು ಲಸಿಕೆಯಲ್ಲದೇ ಅಸ್ವಸ್ಥಳಾಗಿದ್ದಕ್ಕೆ ಇಂಜೆಕ್ಷನ್ ಚುಚ್ಚಿ ವನಸ್ಥಲಿಪುರಂನ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ, ಆರೋಗ್ಯ ಸುಧಾರಿಸಿದ ಬಳಿಕ ಯುವತಿಯನ್ನು ಶನಿವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.