ಖ್ಯಾತ ಹಿನ್ನೆಲೆ ಗಾಯಕಿ ಟಪು ಮಿಶ್ರಾ ಕೊರೋನಾ ಗೆ ಬಲಿ
Sunday, June 20, 2021
ಭುವನೇಶ್ವರ: ಖ್ಯಾತ ಆಲಿವುಡ್ ಹಿನ್ನೆಲೆ ಗಾಯಕಿ ಟಪು ಮಿಶ್ರಾ, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಕೋವಿಡ್-19 ಕಾರಣದಿಂದ ತಂದೆ ತೀರಿಕೊಂಡ ಒಂಬತ್ತು ದಿನಗಳ ನಂತರ ಮೇ 19 ರಂದು ಇವರನ್ನು ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೋವಿಡ್‌ನಿಂದ ಚೇತರಿಸಿಕೊಂಡರೂ, ಕೊರೊನಾ ನಂತರದ ತೊಂದರೆಗಳು ಮತ್ತು ಶ್ವಾಸಕೋಶ ತೀವ್ರ ಹಾನಿಗೊಂಡ ಕಾರಣ ಟಪು ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ,ಕಳೆದ ಎರಡು ದಿನಗಳಿಂದ ವೆಂಟಿಲೇಟರ್ ಸಹಾಯ ದಲ್ಲಿದ್ದ ಗಾಯಕಿ ರಾತ್ರಿ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.