ಈ ನಟಿಗೆ ಲೈಂಗಿಕ ಕಿರುಕುಳ- ಕೀಟಲೆ ಕೊಟ್ಟವರ ಹೆಸರು ಬಹಿರಂಗಪಡಿಸಿದ ಬಳಿಕ ಅಲ್ಲೊಲ್ಲ ಕಲ್ಲೋಲ (video)
Thursday, June 17, 2021
ತಿರುವನಂತಪುರಂ (ಕೇರಳ): ಮಲಯಾಳಂ ಚಿತ್ರರಂಗದ ನಟಿ ರೇವತಿ ಸಂಪತ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟ, ನಿರ್ದೇಶಕ, ಡಿವೈಎಫ್ಐ ನಾಯಕ, ವೈದ್ಯ ಸೇರಿ 14 ಮಂದಿ ಖ್ಯಾತನಾಮರ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ರೇವತಿಯವರು ತಮ್ಮ ಸುದೀರ್ಘ ಫೇಸ್‌ಬುಕ್ ಪೋಸ್ಟ್ ಮೂಲಕ ನಟ ಸಿದ್ದೀಕ್, ನಿರ್ದೇಶಕ ರಾಜೇಶ್ ತೌಚ್‌ರೈವರ್, ನಂದು ಅಶೋಕನ್ ಸೇರಿದಂತೆ ವೈದ್ಯ, ಸಬ್ ಇನ್ಸ್ಪೆಕ್ಟರ್ರನ್ನೊಳಗೊಂಡ 14 ಮಂದಿ ಖ್ಯಾತನಾಮರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇವರೆಲ್ಲರೂ ತನಗೆ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾತಿನಿಂದ ನನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.
ರೇವತಿ ಸಂಪತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಮಲಯಾಲಂ ಚಿತ್ರರಂಗದಲ್ಲಿ ಬಿರುಗಾಳಿ ಎದ್ದಿದೆ. ಆದರೆ ನಟ್ಟಿಗರು ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಎಂದು ನಟಿಯನ್ನು ಪ್ರಶ್ನಿಸಿದ್ದಾರೆ. ಆದರೆ ಕೆಲ ಅಭಿಮಾನಿಗಳು, ನೆಟ್ಟಿಗರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.