
Mangalore;ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು
Thursday, June 17, 2021
ಮಂಗಳೂರು: ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ವಿಟ್ಲ ಸಮೀಪದ ಅಳಿಕೆಯ ನಿವಾಸಿಯಾಗಿರುವ ಪ್ರಾಂಜಲಿ ಶೆಟ್ಟಿ (17) ಮೃತಪಟ್ಟವರು. ಇವರು ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು. ಇವರು ಅಳಿಕೆ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಪೂವಪ್ಪ ಶೆಟ್ಟಿ ಮತ್ತು ಲತಾ ಪಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ. ತಂದೆ-ತಾಯಿ ಹಾಗೂ ಸಹೋದರ ಪ್ರಖ್ಯಾತ್ ಶೆಟ್ಟಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ