-->

ವಿಮಾನವನ್ನೇ ಆರು ಅಡಿ ಎತ್ತರಕ್ಕೆ ನಿಲ್ಲಿಸಬಲ್ಲ ಜಗತ್ತಿನ ಬೃಹತ್ ಅಯಸ್ಕಾಂತ ಫ್ರಾನ್ಸ್ ನಲ್ಲಿ ನಿರ್ಮಾಣ

ವಿಮಾನವನ್ನೇ ಆರು ಅಡಿ ಎತ್ತರಕ್ಕೆ ನಿಲ್ಲಿಸಬಲ್ಲ ಜಗತ್ತಿನ ಬೃಹತ್ ಅಯಸ್ಕಾಂತ ಫ್ರಾನ್ಸ್ ನಲ್ಲಿ ನಿರ್ಮಾಣ

ಪ್ಯಾರಿಸ್‌: ಜಗತ್ತಿನ ಬೃಹತ್‌ ಗಾತ್ರದ ಆಯಸ್ಕಾಂತವೊಂದು ಫ್ರಾನ್ಸ್‌ನ ದಕ್ಷಿಣ ಭಾಗದ ಸೇಂಟ್‌ ಪೌಲ್‌ ಡ್ಯೂರಾನ್ಸ್‌ ಎಂಬಲ್ಲಿ ನಿರ್ಮಾಣವಾಗುತ್ತಿದೆ. 59 ಅಡಿ ಎತ್ತರ ಮತ್ತು 14 ಅಡಿ ಅಗಲದ ಈ ಅಯಸ್ಕಾಂತವು ವಿಮಾನವನ್ನು ನೆಲದಿಂದ ಆರು ಅಡಿ ಎತ್ತರ ಸೆಳೆದು ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿದೆ.

ಈ ಅಯಸ್ಕಾಂತದ ನಿರ್ಮಾಣ ಕಾರ್ಯ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಅದಕ್ಕೆ “ಸೆಂಟ್ರಲ್‌ ಸೊಲೊನಾಯ್ಡ’ ಎಂದು ಹೆಸರಿಡಲಾಗಿದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ 2,80,000 ಪಾಲು ಹೆಚ್ಚಿನ ಶಕ್ತಿಯನ್ನು ಹೊಂದಿರುವ ಈ ಅಯಸ್ಕಾಂತವನ್ನು ಫ್ಯೂಷನ್‌ ಎನರ್ಜಿ ಸೃಷ್ಟಿಸುವ ನಿಟ್ಟಿನಲ್ಲಿ ಅದನ್ನು ಬಳಕೆ ಮಾಡಲಾಗುತ್ತದೆ ಎಂದು ಅದನ್ನು ವಿನ್ಯಾಸಗೊಳಿಸಿ, ನಿರ್ಮಾಣದ ಹೊಣೆ ಹೊತ್ತುಕೊಂಡಿರುವ ಜನರಲ್‌ ಆಟೋಮಿಕ್ಸ್‌ ಎಂಬ ಸಂಸ್ಥೆ ಹೇಳಿದೆ. 

ಜಗತ್ತಿನ ಅತ್ಯಂತ ದೊಡ್ಡ ಬದಲಿ ಇಂಧನ ಯೋಜನೆ (ಐಟಿಇಆರ್‌) ಇದಾಗಿದ್ದು, ಭಾರತ, ಚೀನಾ, ಐರೋಪ್ಯ ಒಕ್ಕೂಟ, ಅಮೆರಿಕ, ಜಪಾನ್‌, ಕೊರಿಯಾ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಿವೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99