ಕಳೆದ ಕೆಲವು ದಿನಗಳ ಹಿಂದೆ ಮುಂಬೈನ ಜುಹು ಮತ್ತು ಬಾಂದ್ರಾದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಲಕ್ಷುರಿ ವಿಲ್ಲಾಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಜುಹುನಲ್ಲಿ ದುಬಾರಿ ಮೊತ್ತಕ್ಕೆ ಬಂಗಲೆಯೊಂದನ್ನು ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಆಕೆಯ ಬಾಯ್‌ಫ್ರೆಂಡ್ ಖರೀದಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಅಡ್ವಾನ್ಸ್ ಮೊತ್ತವನ್ನು ನೀಡಲಾಗಿದ್ದು, ಮುಂಬೈನಲ್ಲಿ ಲಾಕ್‌ಡೌನ್ ತೆರವಾದ ಬಳಿಕ ತಮ್ಮ ಹೆಸರಿಗೆ ಬಂಗಲೆಯ ರೆಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಾರಂತೆ.