50 ಲಕ್ಷ ಖರ್ಚು ಮಾಡಿ ಕೊರೊನಾ ಗೆದ್ದಳು.... ಆದರೆ....
Thursday, June 17, 2021
ಪೆದ್ದಪಲ್ಲಿ: ವೈವಾಹಿಕ ಜೀವನದಲ್ಲಿ ಕಾಲಿಡಲು ಸ್ವದೇಶಕ್ಕೆ ಆಗಮಿಸಿದ್ದ ಯುವತಿಗೆ ಕೋವಿಡ್ ಸೋಂಕು ತಗುಲಿ ಅದರಿಂದ ಗುಣಮುಖಳಾಗಿ ಮತ್ತೆ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೋದಾವರಿಖನಿಯಲ್ಲಿ ನಡೆದಿದೆ.
ಸ್ಥಳೀಯ ಎನ್ಟಿಪಿಸಿ ಕೃಷ್ಣನಗರದ ಪೆಂಡ್ಯಾಲ ರವೀಂದ್ರ ರೆಡ್ಡಿ ಎಂಬವರ ಮಗಳು ನರಿಷ್ಮರೆಡ್ಡಿ (28) ಹೈದರಾಬಾದ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಏಳೂವರೆ ವರ್ಷಗಳ ಹಿಂದೆ ಅಮೆರಿಕಗೆ ತೆರಳಿದ್ದರು. ಮೇ ತಿಂಗಳ ಕೊನೆಯಲ್ಲಿ ಮದುವೆ ನಿಶ್ಚಯವಾಗಿದ್ದರಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು
ಕೆಲಸದ ನಿಮಿತ್ತ ನರಿಷ್ಮ ಚೆನ್ನೈಗೆ ಹೋಗಿ ಬಂದ ಮೇಲೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕಾಗಿ ಚಿಕಿತ್ಸೆ ಪಡೆದ ಅವರು ಕೋವಿಡ್ನಿಂದ ಸಂಪೂರ್ಣ ಗುಣಮುಖರಾಗಿದ್ದರು. ಇದಾದ ಬಳಿಕ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 40 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಯುವತಿ ಸಾವನ್ನಪ್ಪಿದ್ದಾಳೆ.
ಮಗಳ ಚಿಕಿತ್ಸೆಗೆ ಸುಮಾರು 50 ಲಕ್ಷ ರೂ ಖರ್ಚು ಮಾಡಿದ್ದೇವೆ. ಆದ್ರೂ ಆಕೆ ಬದುಕುಳಿಯಲಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.