ಮಗಳಿಗೆ ಬೆಂಕಿ ಹಚ್ಚಿದ ಪೋಷಕರು.. ಕಾರಣವೇನು ಗೊತ್ತಾ?
Thursday, June 17, 2021
ಕಡಪ (ಆಂಧ್ರಪ್ರದೇಶ): ಯುವತಿ ತನ್ನ ಪೋಷಕರ ಇಚ್ಛೆಯಂತೆ ಮದುವೆಯಾಗಲು ನಿರಾಕರಿಸಿ ತಾನು ಪ್ರೀತಿಸುತ್ತಿದ್ದ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಕಾರಣಕ್ಕಾಗಿ ಆಕೆಗೆ ಪೋಷಕರೆ ಬೆಂಕಿ ಹಚ್ಚಿದ ಘಟನೆ ರಾಯಚೋಟಿ ಪಟ್ಟಣದಲ್ಲಿ ಸಂಭವಿಸಿದೆ.
ಇಲ್ಲಿನ ರಾಯಚೋಟಿ ಪಟ್ಟಣದ 20 ವರ್ಷದ ಯುವತಿ ಒಬ್ಬಾತನನ್ನು ಪ್ರೀತಿಸುತ್ತಿದ್ದು ಆದರೆ, ಅವಳ ಹೆತ್ತವರು ಪ್ರೀತಿಯನ್ನು ವಿರೋಧಿಸಿದರು ಮತ್ತು ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಈ ಕಾರಣದಿಂದಾಗಿ ಮನೆಯಲ್ಲಿ ಅನೇಕ ಜಗಳಗಳು ನಡೆದಿದ್ದವು ಮತ್ತು ಜಗಳ ಮುಂದುವರಿದು, ಯುವತಿಯ ಪೋಷಕರು ಮತ್ತು ಕಿರಿಯ ಸಹೋದರ ತಜುದ್ದೀನ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯ ಸಹೋದರಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.