ಜೂನ್ 8ರ ರಾತ್ರಿ ಖಾಸಗಿ ಆ್ಯಂಬುಲನ್ಸ್ ಚಾಲಕ ಪಿಂಟು ಎಂಬ ಕಾಮುಕ, ಯುವತಿಯ ಡೈಪರ್ ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಯುವತಿ ಚಿರಾಡಿದ ಬಳಿಕ ಕಾಮುಕ ಅಲ್ಲಿಂದ ಪರಾರಿಯಾಗಿದ್ದ.
ಘಟನೆ ನಂತರ ಮಾನಸಿಕವಾಗಿ ಮತ್ತಷ್ಟು ನೊಂದಿದ್ದ ಯುವತಿಗೆ ಕೊರೊನಾ ಸೋಂಕಿನ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾಳೆ.
ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.