Mangalore- ಗುರುಪುರದಲ್ಲೊಂದು ಅಚ್ಚರಿ- 300 ವರ್ಷಗಳ ಹಳೆಯ ದೈವದ ಮೂರ್ತಿ ಪತ್ತೆ
Thursday, June 17, 2021
ಮಂಗಳೂರು: ಮಂಗಳೂರು ತಾಲೂಕಿನ ಗುರುಪುರದಲ್ಲಿ ಅಚ್ಚರಿಯೆಂಬಂತೆ ಉತ್ಖನನ ವೇಳೆ 300 ವರ್ಷಗಳ ಹಳೆಯ ದೈವದ ಮೂರ್ತಿ ಮತ್ತು ಪರಿಕರಗಳು ಪತ್ತೆಯಾಗಿದೆ.
ಮಾಣಿಬೆಟ್ಟು ಶ್ರೀ ಕೋರ‌್ದಬ್ಬು ಪರಿವಾರ ದೈವಸ್ಥಾನ ಬಳಿಯೆ ಇರುವ ಮೂಲ ಸಾನ್ನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದಾಗ ಇದು ದೊರೆತಿದೆ.ಕೋರ‌್ದಬ್ಬು ಅಥವಾ ಪಂಜುರ್ಲಿ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ(ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳು ಸುಮಾರು 300 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪರಿಕರಗಳು ಎಂದು ಹೇಳಲಾಗುತ್ತಿದೆ.
ದೈವಸ್ಥಾನದಲ್ಲಿ ಇತ್ತೀಚಿಗೆ ಇಡಲಾದ ತಾಂಬೂಲ ಪ್ರಶ್ನೆ ವೇಳೆ ಶಶಿಕುಮಾರ್ ಪಂಡಿತ್ ಅವರು ಹಳೆ ದೈವಸ್ಥಾನವಿದ್ದ ಜಾಗದಲ್ಲಿ ದೈವದ ಸೊತ್ತುಗಳಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಬುಧವಾರ ಸ್ಥಳದಲ್ಲಿ ಉತ್ಖನನ ಮಾಡಿದಾಗ ಸುಮಾರು 300 ವರ್ಷಗಳಷ್ಟು ಹಳೆಯ ಮೂರ್ತಿಪತ್ತೆಯಾಗಿದೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.