ಟಿಕ್ಟಾಕ್ನಲ್ಲಿ ಪರಿಚಯ, ನಂತರ ಪ್ರೀತಿ, ಮದುವೆ ಕೊನೆಗೆ ಒಂದು ದುರಂತ ಅಂತ್ಯ...!!
Thursday, June 24, 2021
ಗಂಗಾವತಿ : ಟಿಕ್ಟಾಕ್ನಲ್ಲಿ ಪರಿಚಯವಾದ ಹುಡುಗನನ್ನು ಮದುವೆಯಾಗಿ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಣಾಪುರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ವಿಕ್ರಮ್ (22) ಮೃತ ದುರ್ದೈವಿ . ಒಂದೂವರೆ ವರ್ಷದಿಂದ ಟಿಕ್ಟಾಕ್ನಲ್ಲಿ ವಿಕ್ರಮ್ಕ ನ ಪರಿಚಯವಾಗಿ ನಂತರ ಪ್ರೀತಿ ಆಗಿತ್ತು. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ತನಗೆ ಬೇರೆ ಹುಡುಗನೊಂದಿಗೆ ಮನೆಯವರು ಮದುವೆ ಮಾಡುತ್ತಿದ್ದುದಾಗಿ ತಿಳಿಸಿದ ಶಿಲ್ಪಾ ತನ್ನನ್ನು ಕರೆದೊಯ್ಯುವಂತೆ ಕೋರಿದ್ದಳು.
ಯುವತಿಯ ಸಾವಿಗೆ ಗಂಡ ವಿಕ್ರಮ್, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಪೀಟರ್ಪೌಲ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.