ಪ್ರೀತಿಸಿ ಮದುವೆಯಾದ ಜೋಡಿ: ಕುಟುಂಬದವರಿಂದ ರಕ್ಷಣೆಗಾಗಿ ಮನವಿ
Thursday, June 24, 2021
ಬರೇಲಿ(ಉತ್ತರ ಪ್ರದೇಶ): ಬೇರೆ ಸಮುದಾಯದ ಜೋಡಿಯೊಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇದೀಗ ಕುಟುಂಬದಿಂದ ತಮಗೆ ರಕ್ಷಣೆ ನೀಡುವಂತೆ ಕೋರಿ ಎಸ್ಪಿಗೆ
ಪತ್ರ ಬರೆದಿದ್ದಾರೆ.
ಹಫೀಜ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಸುಖ್ಪಾಲ್, ಕಳೆದ ಮೂರು ವರ್ಷಗಳಿಂದ ಶಬಾನಾಳನ್ನ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಯುವತಿ ಮನೆಯವರಿಗೆ ವಿಷಯ ಗೊತ್ತಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೂನ್ 20ರಂದು ಜೋಡಿ ಮನೆಯಿಂದ ಪರಾರಿಯಾಗಿದೆ. ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿರುವ ವಿಡಿಯೋ ವೈರಲ್ ಮಾಡಿದ್ದು, ತಾವಿಬ್ಬರು ಪರಸ್ಪರ ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದೇವೆ. ತಮಗೆ ರಕ್ಷಣೆ ನೀಡುವಂತೆ ಕೇಳಿ ಕೊಂಡಿದ್ದಾರೆ.