-->
ಬಾಡಿಗೆ ಮನೆಯಲ್ಲಿ ಹಲವು ಯುವತಿಯರ ವಾಸ: ರಟ್ಟಾಯಿತು ಗುಟ್ಟು!

ಬಾಡಿಗೆ ಮನೆಯಲ್ಲಿ ಹಲವು ಯುವತಿಯರ ವಾಸ: ರಟ್ಟಾಯಿತು ಗುಟ್ಟು!


ಕರ್ನೂಲ್​:  ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ​ ಮಾಧವಿನಗರದ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು   ಯುವತಿಯರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಕರ್ನೂಲ್​ನ ಹೊರವಲಯದ ಮಾಧವಿನಗರದ ಸ್ಟೇಟ್​ ಬ್ಯಾಂಕ್​ ಕಾಲನಿಯಲ್ಲಿ ವೆಂಕಟೇಶ್ವರ್​ ಮತ್ತು ಕೀರ್ತಿ ಎಂಬುವರು ಬಾಡಿಗೆ ಮನೆ ಪಡೆದಿದ್ದರು. ಈ ಮನೆಯಲ್ಲಿ ಆಂಧ್ರದ ವಿವಿಧ ಭಾಗಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌.

ದಾಳಿ ನಡೆಸಿದ ಸಂದರ್ಭ ಕಿಂಗ್​ಪಿನ್​ ವೆಂಕಟೇಶ್ವರ್​ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಸ್ಥಳದಲ್ಲಿದ್ದ ಜಾಕೀರ್​ ಹುಸೇನ್​ನನ್ನು ಸಹ ವಶಕ್ಕೆ ಪಡೆಯಲಾಗಿದೆ. ಆಂಧ್ರದ ಗುಂಟೂರು ಮತ್ತು ಅಲ್ಲಗಡ್ಡ ಏರಿಯಾದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕೀರ್ತಿ ಮತ್ತು ವೆಂಕಟೇಶ್ವರ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕೀರ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99