Mangalore- ಕಕ್ಕಿಂಜೆಯಲ್ಲಿ 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ-ಆರೋಪಿ ಅಂದರ್!
Tuesday, June 8, 2021
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನ4 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಕತ್ತರಿಗುಡ್ಡೆ ನಿವಾಸಿ ವಿಘ್ನೇಶ್ ಭಂಡಾರಿ ಎಂಬಾತ ಈ ಕೃತ್ಯ ಎಸಗಿದವನು. ಈತ 4 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆದು ತಂದು ಬೆತ್ತಲೆ ಚಿತ್ರಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ . ಈ ಬಗ್ಗೆ ಬಾಲಕಿಯ ತಂದೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಪೋಲೀಸರು ಬಂಧಿಸಿದ್ದು, ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ.