-->

Putturu;ಮದುವೆ ನಿಶ್ಚಿತಾರ್ಥವಾಗಿದ್ದ 25 ವರ್ಷದ ಯುವತಿ ಆತ್ಮಹತ್ಯೆ

Putturu;ಮದುವೆ ನಿಶ್ಚಿತಾರ್ಥವಾಗಿದ್ದ 25 ವರ್ಷದ ಯುವತಿ ಆತ್ಮಹತ್ಯೆ



ಪುತ್ತೂರು :  ಮದುವೆ ನಿಶ್ಚಿತಾರ್ಥವಾಗಿದ್ದ 25 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಕಾಸರಗೋಡಿನ ನೆಟ್ಟಣಿಗೆ ಗ್ರಾಮದ ಕುಳದಪಾರೆ ಸಮೀಪದ ನಿದಿಯಡ್ಕ ನಿವಾಸಿಯಾದ ಸುಬ್ಬಣ್ಣಾ ನಾಯ್ಕ ಅವರ ಪುತ್ರಿ ಪ್ರಿಯಾ ( 25 ) ಆತ್ಮಹತ್ಯೆ ಮಾಡಿಕೊಂಡವರು. ಪ್ರಿಯಾ ತಮ್ಮ‌ಮನೆಯಲ್ಲಿ ಜೂ . 6 ರಂದು ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

 ಪ್ರಿಯಾ ಅವರಿಗೆ  ವಿವಾಹ ನಿಶ್ಚಿತಾರ್ಥವಾಗಿದ್ದು , ಮೇ ತಿಂಗಳಿನಲ್ಲಿ ಮದುವೆ ನಡೆಯಬೇಕಿತ್ತು. ಆದರೆ ವಿವಾಹವು ಲಾಕ್‌ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿತ್ತು . ತಾಯಿ ಬೀಡಿ ಬ್ರಾಂಚ್‌ಗೆ ತೆರಳಿದ್ದ ವೇಳೆ ಪ್ರಿಯಾ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ . ಇವರು ಬಡಗನ್ನೂರು ಸರಕಾರಿ ಹಿರಿಯ ಶಾಲೆಯಲ್ಲಿ ಕೆಲಕಾಲ ಗೌರವ ಶಿಕ್ಷಕಿಯಾಗಿಯು ಕೆಲಸ ಮಾಡಿದ್ದರು . ನಂತರ ಈಶ್ವರಮಂಗಲದ ಜೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99