-->
Mangalore- ಮೊಬೈಲ್ ನಲ್ಲಿ ಮಾತಾಡಬೇಡ ಎಂದು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 18 ರ ಯುವತಿ

Mangalore- ಮೊಬೈಲ್ ನಲ್ಲಿ ಮಾತಾಡಬೇಡ ಎಂದು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 18 ರ ಯುವತಿ


ಮಂಗಳೂರು; ಮೊಬೈಲ್ ನಲ್ಲಿ ಹೆಚ್ಚು ಮಾತಾಡಬೇಡ ಎಂದು ಹೇಳಿದ್ದಕ್ಕೆ ಯುವತಿಯೊಬ್ಬಳು ಮನೆ ಬಿಟ್ಟು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಂಟ್ವಾಳ  ತಾಲೂಕು ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ಎಂಬಲ್ಲಿಂದ ತನ್ನ  ಮಗಳು ಕುಮಾರಿ ದೀಕ್ಷಾ (18) ನಾಪತ್ತೆಯಾದ ಹುಡುಗಿ.  ಈಕೆ ಹೆಚ್ಚಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಇದನ್ನು ಆಕೆಯ ತಾಯಿ ಪ್ರಶ್ನಿಸಿದ್ದರು. 

ದೀಕ್ಷಾ ಜೂನ್  6ರಂದು ಬೆಳಗ್ಗೆ 7:30 ಗಂಟೆಗೆ ಮನೆ ಬಿಟ್ಟು ಹೋಗಿದ್ದಾಳೆ.   ಕಾಣೆಯಾದ ದೀಕ್ಷಾಳು ಹೆಚ್ಚಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದುದ್ದನ್ನು ತಾಯಿ ಪ್ರಶ್ನಿಸಿದ್ದ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದಾಳೆ. ಮಗಳನ್ನು ಪತ್ತೆಮಾಡಿ ಕೊಡುವಂತೆ ಆಕೆಯ ತಾಯಿ ಮೀನಾಕ್ಷಿ ಅವರು ಕೋಣಾಜೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದ ಯುವತಿಗೆ 18 ವರ್ಷ ವಯಸ್ಸಾಗಿದ್ದು, ದುಂಡು ಮುಖ, ಗೋಧಿ ಬಣ್ಣ ಸಾಧಾರಣಾ ಮೈಕಟ್ಟು ಹೊಂದಿದ್ದಾರೆ. ಕಾಣೆಯಾದ ಸಮಯದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಚೂಡಿದಾರ್ ಟಾಪ್ ಧರಿಸಿರುತ್ತಾರೆ. ಕನ್ನಡ, ಮಲಯಾಳಂ, ತುಳು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ಈ ಚಹರೆಯುಳ್ಳ ಯುವತಿಯ ಪತ್ತೆಯಾದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿ ಅಥವಾ ಕೊಣಾಜೆ ಪೊಲೀಸ್ ಠಾಣೆ ದೂ. ಸಂಖ್ಯೆ: 0824-2220536, 9480802350 ಹಾಗೂ 0824-2220800 ಗೆ ಸಂಪರ್ಕಿಸಬಹುದು ಎಂದು ಕೊಣಾಜೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article