ವಿಷ ಕುಡಿದು ಪ್ರಿಯಕರನ ಮಡಿಲಲ್ಲಿ ಪ್ರಾಣ ಬಿಟ್ಟ ಪ್ರೇಯಸಿ..!
Thursday, June 24, 2021
ವಿಜಯಪುರ: ವಿಷ ಕುಡಿದು
ರಕ್ತಕಾರುತ್ತಿದ್ದ ಪ್ರೇಯಸಿಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರಿಯಕರ ಸಂತೈಸುತ್ತಿದ್ದು ಕೊನೆಗೂ ಆಕೆ ಅವನ ಮಡಿಲಲ್ಲೇ ಪ್ರಾಣಬಿಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ.
ಗಂಗೂರು ಗ್ರಾಮದ ಅಶೋಕ ಎಂಬುವರ ಪತ್ನಿ ರೇಣುಕಾ ಝಳಕಿ(36) ಮೃತ ದುರ್ದೈವಿ. ಅಶೋಕ ಮತ್ತು ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರೇಣುಕಾ ಬಸವರಾಜ್ ಎಂಬತಾನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು, ಬಸವರಾಜ್ಗೂ ಬೇರೊಬ್ಬಳೊಂದಿಗೆ ಮದುವೆ ಆಗಿ 6 ಮಕ್ಕಳಿವೆ. ಬೇರೆ ಬೇರೆ ಮದುವೆಯಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಜೋಡಿ ಮಂಗಳವಾರ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದೆ. ಬಸವರಾಜ್, ಕಡಿಮೆ ವಿಷ ಸೇವಿಸಿದ್ದು, ರೇಣುಕಾ ಹೆಚ್ಚು ವಿಷ ಕುಡಿದಿದ್ದಳು. ಅಸ್ವಸ್ಥಗೊಂಡ ಒದ್ದಾಡಿತ್ತಿದ್ದ ರೇಣುಕಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಪ್ರಿಯಕರ ಬಸವರಾಜ್ ಸಂತೈಸುತ್ತಿದ್ದ.
ಇವರಿಬ್ಬರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಕುರಿಗಾಯಿಗಳು ಇದನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ರೇಣುಕಾ ಸತ್ತಿದ್ದು, ಬಳಿಕ ಬಸವರಾಜ್ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.