
ಅಪ್ಪನ ಅಕೌಂಟ್ ನಿಂದಲೇ ಯುವತಿಗೆ 18 ಲಕ್ಷ ಟ್ರಾನ್ಸ್ ಫರ್ ಮಾಡಿದ ಮಗ- ಇದು ಅಮೇರಿಕಾದ ಅಧ್ಯಕ್ಷ ನ ಮಗನ ಕಥೆ!
Thursday, June 24, 2021
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಮಗ ಹಂಟರ್ ಬೈಡೆನ್ ಅವರ ಮೇಲೆ ಈಗಾಗಲೇ ಹಲವಾರು ಆರೋಪಗಳು ಇದ್ದು ಇದೀಗ ಅದಕ್ಕೆ ಮತ್ತೊಂದು ಆರೋಪ ಸೇರಿದೆ. ಈ ಆರೋಪ ಏನಂದ್ರೆ ಹಂಟರ್ ಬೈಡನ್ ಅವರು, ಕಾಲ್ ಗರ್ಲ್ ಒಬ್ಬಳಿಗೆ ಬರೋಬ್ಬರಿ 18 ಲಕ್ಷ ರೂ.ವನ್ನು ತನ್ನ ಅಪ್ಪನ ಅಕೌಂಟ್ನಿಂದಲೇ ಟ್ರಾನ್ಸ್ಫರ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಈ ಘಟನೆ ನಡೆದದ್ದು 2018ರ ಮೇ ತಿಂಗಳಲ್ಲಿ. ಹಂಟರ್ ಈ ಸಂದರ್ಭ ಚಟೌ ಮಾರ್ಮಾಂಟ್ ಹೆಸರಿನ ಹೋಟೆಲ್ನಲ್ಲಿ ತಂಗಿದ್ದು, ಎಮರಾಲ್ಡ್ ಫ್ಯಾಂಟಸಿ ಹೆಸರಿನ ವೇಶ್ಯಾವಾಟಿಕೆ ಕೇಂದ್ರದಿಂದ ಯಾನಾ ಎಂಬ ಕಾಲ್ ಗರ್ಲ್ಗೆ ಮೆಸೇಜ್ ಮಾಡಿ ಕರೆಸಿಕೊಂಡಿದ್ದರು. ರಾತ್ರಿಯಿಡಿ ಆಕೆಯೊಂದಿಗೆ ವೈನ್ ಸೇವನೆ ಮಾಡುತ್ತಾ, ಅಶ್ಲೀಲ ವೀಡಿಯೋಗಳನ್ನು ಮಾಡುತ್ತಾ ಕಳೆದಿದ್ದರು. ಅದಾದ ಬಳಿಕ ಅವರ ಕಾರ್ಡ್ನಿಂದ ಹಣ ಸಂದಾಯ ಮಾಡಲು ಪ್ರಯತ್ನಿಸಿದ್ದರಾದರೂ ಕಾರ್ಡ್ ಡಿಕ್ಲೇನ್ ಆಗಿತ್ತು.
ನಂತರ ಬೇರೊಂದು ಅಕೌಂಟ್ನಿಂದ ನಾಲ್ಕೈದು ಬಾರಿ ಒಟ್ಟು 25 ಸಾವಿರ ಡಾಲರ್ ಅಂದರೆ ಸರಿಸುಮಾರು 18 ಲಕ್ಷ ರೂ. ಸಂದಾಯ ಮಾಡಿದ್ದರು. ಕೇವಲ ಒಂದು ಗಂಟೆಯ ಅವಧಿಯಲ್ಲಿ ಅಷ್ಟೂ ಹಣ ಸಂದಾಯವಾಗಿತ್ತು. ಅದನ್ನು ಕಂಡ ಯಾನಾ ನನ್ನ ಅಕೌಂಟ್ನಲ್ಲಿ ಇಷ್ಟೊಂದು ಹಣವನ್ನು ಎಂದೂ ನೋಡಿರಲಿಲ್ಲ ಎಂದು ಮೆಸೇಜ್ ಮಾಡಿದ್ದಳು.
ಅಂದ ಹಾಗೆ ಯಾನಾ ಬಳಿ ತನ್ನ ನಿಜವಾದ ಹೆಸರನ್ನು ಹೇಳದ ಹಂಟರ್ ಬೇರೆ ಹೆಸರಿನಿಂದ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.
ಹಂಟರ್ ಬೈಡೆನ್ ಈ ಎಲ್ಲ ಗುಟ್ಟುಗಳನ್ನು ತನ್ನದೊಂದು ಲ್ಯಾಪ್ಟಾಪ್ನಲ್ಲಿ ಸಂಗ್ರಹಿಸಿಟ್ಟಿದ್ದರು. ಅದೇ ಲ್ಯಾಪ್ಟಾಪ್ನಿಂದ ಯಾನಾ ಜತೆ ಚಾಟ್ ಮಾಡಿದ್ದರು ಕೂಡ. ಅದಾಗಿ ಒಂದು ವರ್ಷದ ನಂತರ ಆ ಲ್ಯಾಪ್ಟಾಪ್ ಅನ್ನು ರಿಪೇರಿಗೆ ಕೊಟ್ಟಿದ್ದರು. ಆ ಬಳಿಕವೇ ಅದರಲ್ಲಿದ್ದ ಈ ಸೀಕ್ರೇಟ್ಗಳು ಒಂದೊಂದಾಗಿ ಹೊರಬರುತ್ತಿರುವುದಾಗಿ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಅದೇನೇ ಇರಲಿ, ರಾಜಕೀಯದಲ್ಲಿ ನಾಯಕನಾಗಿದ್ದ ಅಪ್ಪನ ಬ್ಯಾಂಕ್ ಖಾತೆಯಿಂದ ಯಾಕಾಗಿ ಇಷ್ಟೊಂದು ಹಣ ಸಂದಾಯವಾಯಿತು ಅನ್ನುವ ಚರ್ಚೆಯಂತೂ ಅಮೆರಿಕದ ರಾಜಕೀಯ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.