17 ವರ್ಷದ ಅಪ್ರಾಪ್ತೆಯನ್ನು ಮಹಡಿಯಿಂದ ನೂಕಿ ವಿಕೃತಿ ಮೆರೆದ ದುಷ್ಕರ್ಮಿಗಳು.. (Video)
Thursday, June 24, 2021
ಲಖನೌ: ಮನೆಯೊಂದಕ್ಕೆ ದುಷ್ಕರ್ಮಿಗಳು ನುಗ್ಗಿ ಕುಟುಂಬದ ಮೇಲೆ ಅಮಾನವೀಯವಾಗಿ ದಾಳಿ ಮಾಡಿದ ಘಟನೆ ಉತ್ತರ ಪ್ರದೇಶ ದಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತೆಯನ್ನು ಎರಡನೇ ಮಹಡಿಯಿಂದ ನೂಕಿ ವಿಕೃತಿ ಮೆರೆದಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಸಂತ್ರಸ್ತೆಯ ಸಹೋದರ ನೀಡಿರುವ ಮಾಹಿತಿಯ ಪ್ರಕಾರ ಕೆಲ ಯುವಕರು ಸುಮಾರು ಒಂದು ವರ್ಷಗಳಿಂದ ಸಹೋದರಿಗೆ ಕಿರುಕುಳ ನೀಡುತ್ತಿದ್ದರಂತೆ. ಸೋಮವಾರ ರಾತ್ರಿ 8 ಗಂಟೆಗೆ ಅಪರಿಚಿತ ವ್ಯಕ್ತಿಗಳಿಗೆ ನನ್ನ ತಂದೆಗೆ ಕರೆಬಂದಿತು. ಇದಾದ ಕೆಲವೇ ಹೊತ್ತಲ್ಲಿ ಕೆಲ ಯುವಕರು ಬೈಕ್ನಲ್ಲಿ ಬಂದು ಬಾಗಿಲು ಮುರಿದು ನನ್ನ ತಂದೆ, ತಾಯಿ ಮತ್ತು ನನ್ನ ಮೇಲೆ ದಾಳಿ ಮಾಡಿದರು. ಇದೇ ವೇಳೆ ಕೋಣೆಯಲ್ಲಿದ್ದ ನನ್ನ ಸಹೋದರಿಯನ್ನು ಇಬ್ಬರು ಯುವಕರು ಎರಡನೇ ಮಹಡಿ ಮೇಲೆ ಎಳೆದೊಯ್ದು ಆಕೆಯ ಮೇಲೆ ದೌಜನ್ಯ ನಡೆಸಿ ಅಲ್ಲಿಂದ ಕೆಳಗಡೆ ನೂಕಿದರು. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದರು ಎಂದು ಸಹೋದರ ದಿನೇಶ್ ಸಿಂಗ್ ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆ ಸಂಬಂಧ ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಸಿರೀಶ್ ಚಂದ್ರ ಮಾತನಾಡಿದ್ದು, ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
A 17-year-old girl #thrown down from the terrace of her second floor house in #Mathura by 3 youths who had been harassing her for the past one year. The victim in the hospital with fractured spinal cord. @mathurapolice @Uppolice @adgzoneagra pic.twitter.com/gtJTjClEbq
— Anuja Jaiswal (@AnujaJaiswalTOI) June 23, 2021