ಮಗುವಿಗೆ ಜನ್ಮ ನೀಡಿ ಲೋ ಬಿಪಿಯಾಗಿ ಮೃತಪಟ್ಟ ತಾಯಿ
Thursday, June 24, 2021
ಮುಳಬಾಗಿಲು: ಮಗುವಿಗೆ ಜನ್ಮ ನೀಡಿದ ತಾಯಿ ಲೋ ಬಿಪಿಯಾಗಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ವೀಣಾ (35) ಮೃತ ದುರ್ದೈವಿ. ಉತ್ತನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತಿದ್ದ ವೀಣಾ ರಾಮಮೂರ್ತಿ ಅವರ ಪತ್ನಿ. ಈ ದಂಪತಿಗೆ ಈಗಾಗಲೇ ಒಂದು ಮಗು ಇದ್ದು, ಮೊನ್ನೆ 2ನೇ ಮಗುವಿಗೆ ವೀಣಾ ಜನ್ಮ ನೀಡಿದ್ದಳು.
ಹೆರಿಗೆ ವೇಳೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ವೀಣಾಳನ್ನು ದಾಖಲಿಸಲಾಗಿತ್ತು. ಲೋ ಬಿಪಿ ಇದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ತಾಯಿ ಮೃತಪಟ್ಟಿದ್ದು, ಮಗು ಆರೋಗ್ಯವಾಗಿದೆ.