
ಯುವತಿಯರ ಮುಂದೆ ಬೆತ್ತಲಾದ ವ್ಯಕ್ತಿ- ಮಕ್ಕಳಿಂದ ನಡೆಯಿತು ದಾಂಧಲೆ!
Thursday, June 24, 2021
ಚಾಮರಾಜನಗರ : ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ವಿಡಿಯೋ ಮಾಡಿ ಪೊಲೀಸರಿಗೆ ಕೊಟ್ಟವರ ಮೇಲೆ, ಆತನ ಮಕ್ಕಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪುಣಜನೂರು ಗ್ರಾಮದ ತಾಂಡವಮೂರ್ತಿ ಎಂಬಾತ ಕುಡಿದು ಮಹಿಳೆಯ ಮುಂದೆ ಅಸಭ್ಯವಾಗಿ ವರ್ತಿಸಿದ್ದ. ಈತನ ರಂಪಾಟವನ್ನು ವಿಡಿಯೋ ಮಾಡಿದ ಸ್ಥಳೀಯರು ಪೊಲೀಸರಿಗೆ ಕೊಟ್ಟಿದ್ದು. ಇದರಿಂದ ಕೋಪಗೊಂಡ ಆತನ ಮಕ್ಕಳಾದ ಮಹೇಂದ್ರ ಮತ್ತು ಸಂತೋಷ್ ಎಂಬವರು, ಇಂದು ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ದಾಂಧಲೆ ನಡೆಸಿದ್ದಾರೆ.
ಅಸಭ್ಯವಾಗಿ ವರ್ತಿಸಿದ ತಾಂಡವಮೂರ್ತಿ ಮತ್ತು ಹಲ್ಲೆ ನಡೆಸಿದ ಆತನ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.