-->

ಟಿಕ್​ಟಾಕಲ್ಲಿ  ಹಣ ಗಳಿಸುವುದು ಹೇಗೆ ಎಂದು ಹೇಳಿಕೊಟ್ಟವಳಿಗೆ 10 ವರ್ಷ ಜೈಲು ಶಿಕ್ಷೆ...

ಟಿಕ್​ಟಾಕಲ್ಲಿ ಹಣ ಗಳಿಸುವುದು ಹೇಗೆ ಎಂದು ಹೇಳಿಕೊಟ್ಟವಳಿಗೆ 10 ವರ್ಷ ಜೈಲು ಶಿಕ್ಷೆ...

 ಕೈರೋ: ಟಿಕ್​ಟಾಕ್​ ಬಳಸುತ್ತಿದ್ದ ಯುವತಿಯೊಬ್ಬಳು ಮಾಡಿದ ತಪ್ಪಿನಿಂದಾಗಿ ಆಕೆ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ.

20 ವರ್ಷ ವಯಸ್ಸಿನ ಹನೀನ್ ಆಕೆ ಟಿಕ್​ಟಾಕ್​ನಲ್ಲಿ ಸಾಕಷ್ಟು ಆಕ್ಟಿವ್ ಇದ್ದು ಸುಮಾರು 9 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಮಹಿಳೆಯರು ಹಣ ಸಂಪಾದನೆ ಮಾಡಲು ಯಾವ ಆ್ಯಪ್​ನಿಂದ ಎಷ್ಟು ಹಣ ಸಂಪಾದನೆ ಮಾಡುವುದರ ಬಗ್ಗೆ ಮಾಹಿತಿ ಕೊಡುತ್ತಿದ್ದಳು. ಆದರೆ ಆಕೆ ವೇಶ್ಯಾವಾಟಿಕೆಗೆ ಸಹಾಯ ಮಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯ ಮೇಲೆ ಈಜಿಪ್ಟ್ ಸರ್ಕಾರ ಪ್ರಕರಣ ದಾಖಲಿಸಿಕೊಂಡಿತ್ತು.

 ಈ ಪ್ರಕರಣದ ವಿಚಾರಣೆಗೆ ಹನೀನ್ ನ್ಯಾಯಾಲಯಕ್ಕೆ ತೆರಳಿಲ್ಲ. ಆ ಹಿನ್ನೆಲೆಯಲ್ಲಿ ಆಕೆಗೆ 10 ಲಕ್ಷ ರೂಪಾಯಿ ದಂಡದ ಜತೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99