ಹಾಡುಹಗಲೆ ಬಿಜೆಪಿ ಮಾಜಿ ಮಹಿಳಾ ಕಾರ್ಪೋರೇಟರ್ ಹತ್ಯೆ- 3 ವರ್ಷದ ಹಿಂದೆ ಪತಿಯ ಹತ್ಯೆಯೂ ನಡೆದಿತ್ತು
Thursday, June 24, 2021
ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರೊಬ್ಬರನ್ನು ದುಷ್ಕರ್ಮಿಗಳು ಇಂದು
ಹತ್ಯೆ ಮಾಡಿದ್ದಾರೆ.
ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ಎಂಬಲ್ಲಿ ಕಚೇರಿ ಮುಂಭಾಗದಲ್ಲಿಯೇ ಇವರನ್ನು ಹತ್ಯೆಗೈಯ್ಯಲಾಗಿದೆ. ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿರುವ ರೇಖಾ ಕದಿರೇಶ್ ಅವರು ಹತ್ಯೆಯಾದವರು. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇಂದು ಬೆಳಿಗ್ಗೆ ಕೊಚ್ಚಿ ಕೊಲೆ ಮಾಡಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದ್ದು ರೇಖಾ ಅವರು ತಮ್ನ ಕಚೇರಿಯ ಒಳಗಿದ್ದರು. ದುಷ್ಕರ್ಮಿಗಳು ಅವರನ್ನು ಹೊರಗಡೆ ಕರೆದು ಅವರು ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಬಿದ್ದ ರೇಖಾ ಅವರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಕಾರ್ಪೊರೇಟರ್ ಆಗಿದ್ದ ಕದಿರೇಶ್ ಎಂಬುವರನ್ನು 2018 ರಲ್ಲಿ ನಡುರಸ್ತೆಯಲ್ಲಿ ದುಷ್ಕರ್ಮಿಗಳು ಕೊಲೆಗೈದಿದ್ದರು. ಅದಾದ 3 ವರ್ಷದ ಬಳಿಕ ರೇಖಾ ಅವರನ್ನು ಕೊಲೆ ಮಾಡಿದ್ದಾರೆ