
ಸದ್ಯದಲ್ಲಿಯೇ ಮದುವೆಗೆ ಒಲ್ಲೆಯೆಂದ ಪ್ರೇಯಸಿ: ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೈದ ಪ್ರಿಯಕರ
Tuesday, June 22, 2021
ಮೆಡ್ಚಲ್(ತೆಲಂಗಾಣ): ಸದ್ಯದಲ್ಲೇ ಮದುವೆಗೆ ಒಲ್ಲೆ ಎಂಬ ಪ್ರಿಯತಮೆಯ ನಿರ್ಧಾರದಿಂದ ಮನನೊಂದ ಪ್ರಿಯಕರನೋರ್ವ ನಾಲ್ಕನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೆಡ್ಚಲ್ ಜಿಲ್ಲೆಯ ಬಾಲಾನಗರದಲ್ಲಿ ನಡೆದಿದೆ
ಮೂಸಾಪೇಟಾ ನಿವಾಸಿ ಕೆ.ಶುಭಂ (27) ಆತ್ಮಹತ್ಯೆ ಮಾಡಿಕೊಂಡ ಯಿವಕ
ಶುಭಂ ಕಳೆದ ಮೂರು ವರ್ಷಗಳಿಂದ ಬಾಲನಗರದ ಯುವತಿಯನ್ನು ಪ್ರೀತಿಸುತ್ತಿದ್ದ. ಎರಡೂ ಕುಟುಂಬಸ್ಥರು ಕುಟುಂಬಸ್ಥರು ಕೂಡಾ ಮದುವೆಗೆ ಒಪ್ಪಿಗೆ ಸೂಚಿಸಿದ್ದರಂತೆ. ಶುಭಂ ಶೀಘ್ರದಲ್ಲೇ ಮದುವೆಯಾಗುವ ತರಾತುರಿಯಲ್ಲಿದ್ದ. ಆದರೆ ಯುವತಿ ಅಕ್ಕನ ಮದುವೆಯಾಗದೆ ತಾನು ಮದುವೆಯಾಗೊಲ್ಲ ಎಂದು ಹೇಳುತ್ತಲೇ ಬಂದಿದ್ದಾಳೆ.
ಈ ಹಿನ್ನೆಲೆಯಲ್ಲಿ ರವಿವಾರ ರಾತ್ರಿ 11 ಗಂಟೆಯ ವೇಳೆ ಶುಭಂ ಮತ್ತೊಮ್ಮೆ ಯುವತಿ ಮನೆಗೆ ತೆರಳಿ ಮದುವೆ ಬಗ್ಗೆ ಮಾತನಾಡಿದ್ದಾನೆ. ಆದರೆ ಯುವತಿ ತನ್ನ ಅಕ್ಕನ ಮದುವೆಯಾಗುವರೆಗೂ ನಾನು ಯಾವುದೇ ಕಾರಣಕ್ಕೂ ವಿವಾಹವಾಗಲಾರೆ ಎಂದು ತನ್ನ ದೃಢ ನಿರ್ಧಾರವನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾಳೆ. ಇದರಿಂದ ಮನನೊಂದ ಶುಭಂ ಪ್ರಿಯತಮೆ ವಾಸಿಸುತ್ತಿದ್ದ ನಾಲ್ಕಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಜಿಗಿದಿದ್ದಾನೆ.
ಕೂಡಲೇ ಸ್ಥಳೀಯರು ಶುಭಂನನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರೊಳಗೆ ಆತ ಕೊನೆಯುಸಿರೆಳೆದಿದ್ದ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಘಟನೆಯ ಬಗ್ಗೆ ಯುವಕನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಮಾಹಿತಿ ನೀಡದೇ ಶುಭಂನನ್ನು ಆಟೋದಲ್ಲಿ ಏಕೆ ಕರೆದೊಯ್ದರು? ಎಂದು ಪ್ರಶ್ನಿಸಿದ್ದಾರೆ. ಯುವತಿಯ ಕುಟುಂಬಸ್ಥರೇ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಅನ್ನೋದು ಶುಭಂ ಪೋಷಕರ ಆರೋಪ ಮಾಡಿದ್ದಾರೆ.