
ಅತೀಹೆಚ್ಚು ಮಕ್ಕಳು ಹೊಂದಿರುವವರಿಗೆ ಲಕ್ಷ ರೂ. ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ ಸಚಿವ
ಮಿಜೋರಾಂ: ಅತೀಹೆಚ್ಚು ಮಕ್ಕಳನ್ನು ಹೊಂದಿರುವ ಹೆತ್ತವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಈಶಾನ್ಯ ರಾಜ್ಯ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಹೇಳಿಕೆಯೊಂದು ಭಾರಿ ವಿವಾದಕ್ಕೆ ಎಡೆಯಾಗಿದೆ.
ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ನೀಡಲಾಗುವುದು. ಅದರೊಂದಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಸಚಿವ ರಾಬರ್ಟ್ ಹೇಳಿದ್ದರು. ಆದರೆ ಜನಸಂಖ್ಯೆ ಸ್ಪೋಟದ ಹಿನ್ನೆಲೆಯಲ್ಲಿ ಒಂದು ಅಥವಾ ಎರಡು ಮಕ್ಕಳಿರಲಿ ಎನ್ನುವ ಈ ಕಾಲದಲ್ಲಿ ಇಂಥದ್ದೊಂದು ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಬರ್ಟ್ ಅವರು, "ನಾನು ನನ್ನ ದೇಶದ ಒಳಿತಿಗಾಗಿ ಈ ಮಾತನ್ನು ಹೇಳಿದ್ದೇನೆ. ಏಕೆಂದರೆ ಮಿಜೋ ಸಮುದಾಯಗಳಲ್ಲಿ ಜನಸಂಖ್ಯೆ ಕಡಿಮೆ ಇರೋದು ಗಂಭೀರ ಸಮಸ್ಯೆಯಾಗಿದ್ದು, ಜನಸಂಖ್ಯೆ ಹೆಚ್ಚಿಸುವ ಕಾರಣದಿಂದ ಈ ಹೇಳಿಕೆ ನೀಡಿದ್ದೇನೆ. ನಾನು ಈಗಲೂ ಹೇಳಿಕೆಗೆ ಬದ್ಧನಾಗಿದ್ದೇನೆ" ಎಂದು ಹೇಳಿದ್ದಾರೆ.