-->
ads hereindex.jpg
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಪತ್ನಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ ಪತ್ನಿ

ಚಿತ್ರದುರ್ಗ: ಪ್ರಿಯಕರನೊಂದಿಗೆ ಸೇರಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆಗೈದ ಘಟನೆ ತಾಲೂಕಿನ ಹಳವುದರ ಗ್ರಾಮದಲ್ಲಿ ನಡೆದಿದೆ. 

ಚಿತ್ರದುರ್ಗ ತಾಲೂಕಿನ ಹಳವುದರ ಗ್ರಾಮದ ಮುರುಗೇಶ್ (38) ಕೊಲೆಯಾದ ವ್ಯಕ್ತಿ. ಆತನ ಪತ್ನಿ ನಾಗಮ್ಮ (32) ಹಾಗೂ ಪ್ರಿಯಕರ ಅರಭಗಟ್ಟ ಗ್ರಾಮದ ಬಸವರಾಜ ಬಂಧಿತರು.

ಚಿತ್ರದುರ್ಗ ತಾಲೂಕಿನ ನೀರತಡಿ ಗ್ರಾಮದ ನಾಗಮ್ಮ ಹಾಗೂ ಮುರುಗೇಶ ದಂಪತಿಗೆ 10 ವರ್ಷದ ಮಗನಿದ್ದು, ಪತಿ- ಪತ್ನಿಯ ಬದುಕು ಅನ್ಯೋನ್ಯವಾಗಿಯೇ ಸಾಗುತ್ತಿತ್ತು. ಕಳೆದ ನಾಲ್ಕು ತಿಂಗಳ ಹಿಂದೆ ಬಸವರಾಜ ಎಂಬ ವ್ಯಕ್ತಿ ಇವರ ಕುಟುಂಬಕ್ಕೆ ಹತ್ತಿರವಾಗಿದ್ದು, ಈತ ನಾಗಮ್ಮನ ಜೊತೆ ಗೆಳೆತನ ಬೆಳೆಸಿದ ಈತ ಸರಸ ಸಲ್ಲಾಪವನ್ನೂ ಶುರು ಮಾಡಿದ್ದಾನೆ. ಈ ವಿಚಾರ ಪತಿಗೆ ತಿಳಿದ ಬಳಿಕ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಗಂಡನೇ ಮುಳ್ಳಾಗುತ್ತಿದ್ದಾನೆ ಎಂದು ತಿಳಿದ ನಾಗಮ್ಮ ಪ್ರಿಯಕರನ ಜೊತೆ ಸೇರಿ ಗಂಡನನ್ನು ಮುಗಿಸುವ ನಿರ್ಧಾರ ಮಾಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಮೇ 27 ರಂದು ಮೊದಲ ಪ್ರಯತ್ನ ಮಾಡ್ತಾಳೆ. ಈ ಪ್ರಯತ್ನ ಅಂದು ಸಫಲವಾಗಿರಲಿಲ್ಲ. ಗಂಡನನ್ನು ಕೊಲೆ ಮಾಡಲೇಬೇಕು ಎಂದೇ ಪಣ ತೊಟ್ಟಿದ್ದ ನಾಗಮ್ಮ ಜೂನ್​ 18 ರಾತ್ರಿ ಹೊಟ್ಟೆನೋವಿನ ನೆಪ ಹೇಳಿ ಗಂಡನನ್ನು ಭರಮಸಾಗರ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಳೆ. ಮೊದಲೇ ಪ್ರಿಯಕರನ ಜೊತೆ ಪ್ಲ್ಯಾನ್​​ ಮಾಡಿಕೊಂಡಿದ್ದ ನಾಗಮ್ಮ ಹೆಗ್ಗೆರೆ ಗ್ರಾಮದ ಮಟ್ಟಿಯ ಬಳಿ ಬೈಕ್​ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಕುತಂತ್ರದ ಬಗ್ಗೆ ಅರಿಯದ ಗಂಡ ಬೈಕ್​​ ನಿಲ್ಲಿಸಿದಾಗ ಪ್ರಿಯಕರ ಮತ್ತು ನಾಗಮ್ಮ ಸೇರಿ ಅಲ್ಲಿಯೇ ಇದ್ದ ಕೃಷಿ ಹೊಂಡಕ್ಕೆ ತಳ್ಳಿ ದಾರುಣವಾಗಿ ಕೊಲೆ ಮಾಡಿದ್ದಾರೆ‌.

ಮುರುಗೇಶನ ತಂದೆ ಭರಮಸಾಗರ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದೀಗ ಬಸವರಾಜನ ಜೊತೆಗೆ ಪತಿಯ ಕೊಲೆಗೆ ಕುಮ್ಮಕ್ಕು ನೀಡಿದ್ದು ಹಾಗೂ ಸಂಚು ರೂಪಿಸಿದ ಆರೋಪದ ಮೇರೆಗೆ ಪತ್ನಿ ಜೈಲು ಸೇರಿದ್ದಾಳೆ.

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242