ಪ್ರಿಯತಮೆಯೊಂದಿಗೆ ಜಗಳ - ಪ್ರಾಣಬಿಟ್ಟ ಪ್ರಿಯತಮ ..
Sunday, June 20, 2021
ನವದೆಹಲಿ: ನೊಯ್ಡಾದ ಗರ್ಹಿ ಚೌಖಂಡಿ ನಿವಾಸಿ ಆಕಾಶ್ ಎಂಬಾತ ತನ್ನ ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿದ ನಂತರ ಮುಸ್ಸೂರಿ ಗ್ಯಾಂಗ್ ಕಾಲುವೆಗೆ ಹಾರಿ ಮೃತಪಟ್ಟಿದ್ದಾನೆ. ಗಾಬರಿಯಿಂದ ಯುವತಿಯೂ ಕಾಲುವೆಗೆ ಹಾರಿದ್ದಾಳೆ. ಆದರೆ ಹತ್ತಿರದಲ್ಲೇ ಇದ್ದ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ.
ಬುಧವಾರ ಬೆಳಗ್ಗೆ ಮುಸ್ಸೂರಿ ರೈಲ್ವೆ ಬ್ರಿಡ್ಜ್ ಬಳಿ ಯುವತಿ ಹಾಗೂ ಪ್ರಿಯಕರನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಯುವತಿಯು ತನ್ನ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ. ಅಷ್ಟೊತ್ತಿಗಾಗಲೇ ಆಕಾಶ್ ಕಾಲುವೆಗೆ ಹಾರಿದ್ದು, ಹೆದರಿದ ಯುವತಿಯೂ ಕಾಲುವೆಗೆ ಹಾರಿದ್ದಾಳೆ.
ಈ ಘಟನೆಯ ನಂತರ ಆಕಾಶ್ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.ಆಕಾಶ್ ಪೋಷಕರು ತನ್ನ ಮಗನ ಸಾವಿಗೆ ಯುವತಿ ಮತ್ತು ಆಕೆ ಗೆಳೆಯರೇ ಕಾರಣ ಎಂದು ಆರೋಪಿಸಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.