
ಶುಗರ್ ಇರೋರಿಗೆ ಸಿಹಿಸುದ್ದಿ..!! ಇನ್ಮುಂದೆ ಸಿಗಲಿದೆಯಂತೆ sugar-free ಮಾವಿನಹಣ್ಣು...
ಇಸ್ಲಾಮಾಬಾದ್: ಮಾವಿನ ಹಣ್ಣು ಎಂದರೆ ಎಲ್ಲರಿಗೂ ಆದರೆ ಶುಗರ್ ಇರೋರಿಗೆ ಮಾತ್ರ ಮಾವಿನಹಣ್ಣು ತಿನ್ನುವುದಕ್ಕೆ ಸ್ವಲ್ಪ ಕಷ್ಟ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಏಕೆಂದರೆ ಮಾವಿನಲ್ಲೂ ಶುಗರ್ ಫ್ರೀ ಮಾವನ್ನು ತಜ್ಞರು ಕಂಡು ಹಿಡಿದಿದ್ದಾರೆ.
ಪಾಕಿಸ್ತಾನದ ಎಂ ಹೆಚ್ ಪನ್ಹ್ವಾರ್ ಫಾರ್ಮ್ಸ್ ಎಂಬ ಖಾಸಗಿ ಕೃಷಿ ಫಾರ್ಮ್‌ನ ತಜ್ಞ ಗುಲಾಮ್ ಸರ್ವಾರ್ ಕಂಡುಹಿಡಿದಿದ್ದಾರೆ. ಮೂರು ರೀತಿಯ ಶುಗರ್ ಫ್ರೀ ಮಾವಿನ ತಳಿಗಳನ್ನು ಕಂಡುಹಿಡಿಯಲಾಗಿದ್ದು ಅದನ್ನು ಶೀಘ್ರದಲ್ಲೇ ಪಾಕ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ಸೋನಾರೊ, ಗ್ಲೆನ್ ಮತ್ತು ಕೀಟ್ ಹೆಸರಿನ ಮೂರು ಶುಗರ್ ಫ್ರೀ ತಳಿಗಳು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ ಕೀಟ್ ಪ್ರಭೇದವು ಕಡಿಮೆ ಸಕ್ಕರೆ ಮಟ್ಟವನ್ನು ಅಂದರೆ 4.7 ಪ್ರತಿಶತದವರೆಗೆ ಸಕ್ಕರೆ ಅಂಶವನ್ನು ಹೊಂದಿದೆ. ಸೋನಾರೊ ಮತ್ತು ಗ್ಲೆನ್ ಸಕ್ಕರೆ ಮಟ್ಟವನ್ನು ಕ್ರಮವಾಗಿ 5.6 ಮತ್ತು 6 ಪ್ರತಿಶತದಷ್ಟು ಎನ್ನಲಾಗಿದೆ. ಸಕ್ಕರೆ ರಹಿತ ಮಾವಿನಹಣ್ಣಿನ ಬೆಲೆ ಪಾಕಿಸ್ತಾನ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಸಾಮಾನ್ಯ ಬಗೆಯ ಮಾವಿನಹಣ್ಣಿಗೆ ಸಮನಾಗಿರುತ್ತದೆ. ಸರಿ ಸುಮಾರು ಕೆಜಿಗೆ 150 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಶುಗರ್ ಫ್ರೀ ಮಾವು ಭಾರತಕ್ಕೂ ಬರುವ ಸಾಧ್ಯತೆಯಿದೆ.