ಪ್ರೀತಿಸಿ ಮದುವೆಯಾದವನ ಜೊತೆ ಬಾಳಿದ್ದು ಒಂದೇ ವರ್ಷ... !! ವಿಧಿಯಾಟ ಬಲ್ಲವರ್ಯಾರು...??
Sunday, June 27, 2021
ಹೊಸನಗರ: ಮದುವೆನೇ ಆಗಲ್ಲ ಎಂದವಳು ತಾನು ಪ್ರೀತಿಸಿದ ಹುಡುಗನೊಂದಿಗೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಒಂದು ವರ್ಷ ತುಂಬುವ ಮುನ್ನವೇ ದುರಂತ ಸಾವನ್ನಪ್ಪಿದ್ದಾಳೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಸೌಂದರ್ಯಾ(೨೧) ಮೃತ ದುರ್ದೈವಿ. ಈಕೆಗೆ ಕಾಡಿಗ್ಗೇರಿಯ ಉಮೇಶ್ ಎಂಬಾತನ ಜೊತೆ ಫೇಸ್ಬುಕ್ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಜಾತಿ ಬೇರೆ ಎಂಬ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ. ವಿರೋಧದ ನಡುವೆಯೂ ಇವರಿಬ್ಬರೂ 2020ರ ನವೆಂಬರ್ನಲ್ಲಿ ವಿವಾಹವಾಗಿದ್ದರು. ನಂತರ ಸೌಂದರ್ಯ ತನ್ನ ಗಂಡನ ಮನೆಯಲ್ಲಿ ವಾಸವಿದ್ದಳು.
ತಂಗಿ ಐಶ್ವರ್ಯಾ ಮೃತಪಟ್ಟಾಗ ಶವಸಂಸ್ಕಾರದ ವೇಳೆ ಉಮೇಶ್ನೊಂದಿಗೆ ಹೋಗಿದ್ದಳು. ಇದಾದ 17 ನೇ ದಿನಕ್ಕೆ ಸೌಂದರ್ಯ ಮೃತದೇಹ ಇವಳ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾಸ್ಪದವಾಗಿ ಪತ್ತೆಯಾಗಿದೆ. ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.