ಮದುವೆಯಾಗಿ ಇನ್ನೂ 3 ತಿಂಗಳಾಗಿರುವ ಯುವಕನಿಂದ ಅಪ್ರಾಪ್ತೆ 6 ತಿಂಗಳ ಗರ್ಭಿಣಿ!
Sunday, June 27, 2021
ತಿರುವನಂತಪುರಂ: ಅಪ್ರಾಪ್ತೆಯೊಂದಿಗೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಕೇರಳದ ಕಜಕ್ಕೂಟಮ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮುತ್ತಾಥರಾ ನಿವಾಸಿ ಅಖಿನೇಶ್ ಅಶೋಕ್ ಬಂಧಿತ ಆರೋಪಿ.
ಆರೋಪಿ ಅಖಿನೇಶ್ ಅಶೋಕ್ ಗೆ ಮೂರು ತಿಂಗಳ ಹಿಂದೆಯೇ ಬೇರೊಂದು ಮದುವೆ ಆಗಿದ್ದನೆಂದು ತಿಳಿದು ಬಂದಿದೆ. ಆರೋಪಿ ಚಾರಿಟಿ ಕೆಲಸದ ಮೇಲೆ ಇನ್ಸ್ಟಾಗ್ರಾಂ ಮೂಲಕ ಅಪ್ರಾಪ್ತ ಬಾಲಕಿಯನ್ನು ಸಂಪರ್ಕಿಸಿದ್ದ. ಬಳಿಕ ಆಕೆಯೊಂದಿಗೆ ಸಲಿಗೆ ಬೆಳೆಸಿದ್ದ ಆರೋಪಿ 2020ರ ಸೆಪ್ಟೆಂಬರ್ನಿಂದ ಅನೇಕ ಬಾರಿ ಅಪ್ರಾಪ್ತೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿ ಆಗಿರುವ ಅಪ್ರಾಪ್ತೆಯನ್ನು ಆಶ್ರಯ ಮನೆಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ.
ಅಪ್ರಾಪ್ತೆಯು ತನ್ನ ತಾಯಿ, ಮಲತಂದೆ ಮತ್ತು ಅಜ್ಜಿಯ ಜತೆ ವಾಸವಿದ್ದಳು. ಆಕೆಯ ತಾಯಿ ಕುಟುಂಬವನ್ನು ಬಿಟ್ಟು ಬೇರೋಬ್ಬನನ್ನು ಮದುವೆಯಾಗಿದ್ದಾರೆ. ಅಜ್ಜಿ ಮನೆಯಲ್ಲಿ ಇರುವಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.