-->
ads hereindex.jpg
ರಿಯಲ್‌ಮಿಯಿಂದ ನಾರ್ಜೊ30 5ಜಿ ಮೊಬೈಲ್, ಸ್ಮಾರ್ಟ್ ಟಿವಿ , ಬಡ್‌ಸ್ ಕ್ಯೂ 2 ಲಾಂಚ್..

ರಿಯಲ್‌ಮಿಯಿಂದ ನಾರ್ಜೊ30 5ಜಿ ಮೊಬೈಲ್, ಸ್ಮಾರ್ಟ್ ಟಿವಿ , ಬಡ್‌ಸ್ ಕ್ಯೂ 2 ಲಾಂಚ್..

ನವದಹಲಿ: ರಿಯಲ್‌ಮಿ ನಾರ್ಜೊ 30 5ಜಿ ಮತ್ತು ರಿಯಲ್‌ಮಿ ನಾರ್ಜೊ 30 ಮೊಬೈಲ್‌ಗಳು ನಾರ್ಜೊ ಫ್ಯಾಮಿಲಿ ಸೇರಿವೆ. ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಹೆಚ್‌ಡಿ 32’’ ಮತ್ತು ರಿಯಲ್‌ಮಿ ಬಡ್‌ಸ್ಕ್ಯೂ 2 ಇಯರ್ ಬಡ್‌ಗಳನ್ನು ಕಂಪೆನಿ ಹೊರತಂದಿದೆ.

ರಿಯಲ್‌ಮಿ ನಾರ್ಜೊ 30 5ಜಿ
 ಮೊಬೈಲ್, ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ ಪ್ರೊಸೆಸರ್ ಹೊಂದಿದೆ. 6.5 ಇಂಚಿನ ಪರದೆಯನ್ನು ಹೊಂದಿದ್ದು, ವೇಗದ ಸೈಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. 48 ಎಂಪಿ ಹೈರೆಸಲ್ಯೂಷನ್ ಬ್ಯಾಕ್ ಕ್ಯಾಮೆರಾ, ಸೆಲ್ಫೀಗಾಗಿ 16 ಎಂಪಿ ಅಲ್ಟ್ರಾ-ಕ್ಲಿಯರ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.6 ಜಿಬಿ 128 ಜಿಬಿ ಸ್ಟೋರೇಜ್ ಇದ್ದು, ಇದರ ದರ 15,999 ರೂ. ಜೂನ್ 30ರ ಮಧ್ಯಾಹ್ನ 12ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.

ರಿಯಲ್‌ಮಿ ನಾರ್ಜೊ 30
ಮೀಡಿಯಾ ಟೆಕ್ ಹೆಲಿಯೋ ಜಿ 95 ಗೇಮಿಂಗ್ ಪ್ರೊಸೆಸರ್. 5000ಎಂಎಹೆಚ್ ಬ್ಯಾಟರಿಯನ್ನು ಒಳಗೊಂಡಿದೆ ಮತ್ತು  30 ವ್ಯಾಟ್‌ಸ್ ಡಾರ್ಟ್ ಚಾರ್ಜರ್ ಹೊಂದಿದೆ. ಇದು 48 ಎಂಪಿ ಎಐ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಸ್ಯಾಮ್‌ಸಂಗ್ ಲೆನ್‌ಸ್ ನ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ದರ: ರೂ. 12499 (4 ಜಿಬಿ 64ಜಿಬಿ) ಮತ್ತು ರೂ. 14499 (6ಜಿಬಿ 128ಜಿಬಿ) ಗೆ ಲಭ್ಯವಿದೆ.  ಜೂನ್ 29, ಮಧ್ಯಾಹ್ನ 12 ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.

ರಿಯಲ್‌ಮಿ ಸ್ಮಾರ್ಟ್ ಟಿವಿ ಫುಲ್ ಎಚ್‌ಡಿ 32
ಅಲ್ಟ್ರಾ-ಬ್ರೆಟ್ ಎಫ್‌ಹೆಚ್‌ಡಿ ಡಿಸ್‌ಪ್ಲೇ, ಅಲ್ಟ್ರಾ-ವಯಡ್ ಗ್ಯಾಮೆಟ್, 85% ಎನ್‌ಟಿಎಸ್‌ಸಿ ವರೆಗೆ 16.7 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ. ಬೆಝೆಲ್ ಲೆಸ್ ವಿನ್ಯಾಸವನ್ನು ಒಳಗೊಂಡಿದೆ. 4 ಸ್ಪೀಕರ್‌ಗಳನ್ನೊಳಗೊಂಡಿದ್ದು, ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.ಇದರ ಬೆಲೆ ರೂ. 18999. ಜೂನ್ 29, ಮಧ್ಯಾಹ್ನ 12 ರಿಂದ ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತದೆ.


ರಿಯಲ್ ಮಿ ಬಡ್‌ಸ್ ಕ್ಯೂ2
ನಾಯ್‌ಸ್ ಕ್ಯಾನ್ಸಲೇಷನ್ ಸೌಲಭ್ಯ ಇರುವ ಟ್ರೂ ವೈರ್ ಲೆಸ್ ಇಯರ್‌ಬಡ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. 10 ಮಿ.ಮಿ. ಬಾಸ್ ಬೂಸ್‌ಟ್ ಇರುವ ಸ್ಪೀಕರ್‌ಗಳಿವೆ. ಇಯರ್‌ಬಡ್ ಮೇಲೆ ಟಚ್ ಮಾಡುವ ಮೂಲಕ ಕರೆ ಸ್ವೀಕಾರ ಅಥವಾ ರದ್ದು ಮಾಡುವ, ಹಾಡುಗಳನ್ನು ಫಾರ್ವರ್ಡ್ ಮಾಡುವ ಆಫ್ ಮಾಡುವ ಸೌಲಭ್ಯ ಇದೆ.ಇದರ ಬೆಲೆ ರೂ. 2499. ಮೊದಲ ಮಾರಾಟವು ಜೂನ್ 30ರಿಂದ. ರಿಯಲ್‌ಮಿ.ಕಾಮ್, ಅಮೆಜಾನ್‌ನಲ್ಲಿ ದೊರಕುತ್ತದೆ.

Ads on article

Advertise in articles 1

advertising articles 2