ಸುಳ್ಳು ಹೇಳಿ ಮದುವೆಯಾಗಿ ಆಕೆಯ ಬಾಳಾಯ್ತು ನರಕ..!ಏನು ವಿಧವೆ Story?
Thursday, June 17, 2021
ಕರ್ನೂಲ್: ವಿಧವೆಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿ ಕೊನೆಗೆ ಆತ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿ ಮತ್ತೊಂದು ಮದುವೆ ಆಗಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಅಲ್ಲಗದ್ದ ವಲಯದಲ್ಲಿ ನಡೆದಿದೆ.
ಆರೋಪಿ ಓಬಳೇಸು ಕರ್ನೂಲ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಮನೆಯ ಮಾಲೀಕರ ಮಗಳು ವಿಜಯಾಗೆ ಮದುವೆಯಾಗಿ ಎರಡು ಮಕ್ಕಳಿದ್ದು, ಆಕೆಯ ಗಂಡ ಮೃತಪಟ್ಟಿದ್ದು
ವಿಜಯಾಗೆ ಈತನ ಪರಿಚಯವಾಗುತ್ತದೆ. ಕೊನೆಗೊಂದು ದಿನ ಆಕೆಗೆ ಮದುವೆ ಪ್ರಸ್ತಾಪ ಮಾಡುತ್ತಾನೆ. ಆದರೆ, ಆರಂಭದಲ್ಲಿ ವಿಜಯಾ ಒಪ್ಪಲಿಲ್ಲ. ವಿಧವೆಯನ್ನು ಮದುವೆಯಾಗುವ ನಿನ್ನ ಉದ್ದೇಶವೇನು ಎಂದು ತಿರಸ್ಕರಿಸಿದ್ದಳು. ನಂತರ ಆತ ಸ್ಥಳೀಯರ ಬಳಿ ಎಲ್ಲವನ್ನು ಹೇಳಿಕೊಳ್ಳುತ್ತಾನೆ. ಆತನ ಮಾತನ್ನು ನಂಬುವ ಸ್ಥಳೀಯರು ವಿಜಯಾ ಪಾಲಕರನ್ನು ಒಪ್ಪಿಸುತ್ತಾರೆ. ಕೊನೆಗೆ ವಿಜಯಾ ಒಪ್ಪಿಗೆ ನೀಡಿ ಮದುವೆಯಾಗುತ್ತಾಳೆ.
ಆದರೆ ನಾಲ್ಕು ತಿಂಗಳ ಹಿಂದೆ ಯಾವುದೋ ಕೆಲಸದ ಮೇಲೆ ಹೊರ ಹೋಗುವ ಓಬಳೇಸು ಪ್ರತಿನಿತ್ಯ ಪತ್ನಿಯೊಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದ. ಆದರೆ, ಕೆಲವು ದಿನಗಳ ಬಳಿಕ ಎಷ್ಟೇ ಫೋನ್ ಮಾಡಿದರೂ ಆತ ಫೋನ್ ತೆಗೆಯುವುದೇ ಇಲ್ಲ. ಇದರ ನಡುವೆ ಓಬಳೇಸು ಮೇ 28 ರಂದು ಮತ್ತೊಂದು ಮಹಿಳೆಯ ಜತೆ ಮದುವೆ ಆಗಿರುತ್ತಾನೆ. ಇದಾದ ಬಳಿಕ ಓಬಳೇಸು ಸ್ನೇಹಿತನೇ ವಿಜಯಾಗೆ ಕರೆ ಮಾಡಿ ನಿನ್ನ ಗಂಡ ಮತ್ತೆ ಮದುವೆ ಆಗುತ್ತಿದ್ದಾನೆಂದು ಹೇಳುತ್ತಾನೆ. ಇದರಿಂದ ಆಘಾತಕ್ಕೆ ಒಳಗಾಗುವ ವಿಜಯಾ, ಓಬಳೇಸುನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ನಡೆಸಿದಾದರೂ ಸಾಧ್ಯವಾಗುವುದಿಲ್ಲ. ಇದೀಗ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾಳೆ. ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾಳೆ.