ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ ಆನಂದ ವಾಘಮೋಡೆ, ಕೊಲೆಯಾಗಿರುವ ಅಪ್ರಾಪ್ತೆಗೆ ತಂದೆಯಿಲ್ಲ, ತಾಯಿ ಇದ್ದಾರೆ. ಇವರ ಮನೆಯ ಆಗುಹೋಗುಗಳನ್ನು ಯುವತಿಯ ಸೋದರ ಮಾವ ನೋಡಿಕೊಳ್ಳುತ್ತಿದ್ದ. ಯುವತಿಯನ್ನು ಆತನೇ ರಾತ್ರಿ ಮನೆಯಿಂದ ಕರೆದೊಯ್ದಿದ್ದ ಎಂದು ಮೃತಳ ತಾಯಿ ತಿಳಿಸಿದ್ದಾಳೆ. ಈ ಕೃತ್ಯವನ್ನು ಸಿದ್ದರಾಮಪ್ಪನೇ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.
ಸೋದರಮಾವನ ಮಾತು ಕೇಳದೇ ಬೇರೊಬ್ಬನನ್ನು ಪ್ರೀತಿಸಿದ್ದಕ್ಕೆ ಆರತಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ತಿಳಿಸಿದ್ದಾರೆ.