
ಡೇಟಿಂಗ್ ಆಪ್ ಸಹವಾಸ: ಆತನಿಗೆ ಎಂತ ಪರಿಸ್ಥಿತಿ ಬಂತು ಗೊತ್ತಾ?
Friday, June 11, 2021
ನವದೆಹಲಿ : ಗ್ರೈಂಡರ್ ಎಂಬ ಸಲಿಂಗಕಾಮಿಗಳ ಡೇಟಿಂಗ್ ಆ್ಯಪ್ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಡೇಟಿಂಗ್ ಆ್ಯಪ್ನ ಮೂಲಕ ಪುರುಷನೊಬ್ಬನನ್ನು ಕರೆದು, ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬ ಗ್ರೈಂಡರ್ ಆ್ಯಪ್ ಮೂಲಕ ಓರ್ವನ ಪರಿಚಯವಾದ ನಂತರ ಖಾಸಗಿ ಸ್ಥಳದಲ್ಲಿ ಭೇಟಿಯಾಗಲು ಹೋಗಿದ್ದು, ಆ ಸಮಯದಲ್ಲಿ ನಾಲ್ಕು ಜನರು ಬಂದು ಚೆನ್ನಾಗಿ ಥಳಿಸಿ, ಅಶ್ಲೀಲ ವಿಡಿಯೋ ಮಾಡಿಸಿ 2 ಲಕ್ಷ ರೂಪಾಯಿ ಕೊಡದಿದ್ದರೆ ವಿಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಸಿದರು ಎನ್ನಲಾಗಿದೆ.
ಆರೋಪಿಗಳಿಗೆ 50,000 ರೂ.ಗಳನ್ನು ಯುಪಿಐ ಮೂಲಕ ಪಾವತಿಸಿದ್ದ ಸಂತ್ರಸ್ತನು, ಹೆಚ್ಚಿನ ಹಣದ ಬೇಡಿಕೆ ಇಟ್ಟಾಗ ಬೀಟಾ 2 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ಕೈಗೊಂಡ ಪೊಲೀಸರು, ಡಿಜಿಟಲ್ ಸರ್ವಿಯಲೆನ್ಸ್ ಬಳಸಿ ದುಷ್ಕರ್ಮಿಗಳ ಲೊಕೇಷನ್ ಪತ್ತೆ ಹಚ್ಚಿದ್ದು, ಗೌರವ್, ಮೋಹಿತ್, ಸಚಿನ್ ಮತ್ತು ಗೌತಮ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.