-->
ads hereindex.jpg
ಮಂಗಳೂರಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಬಂಧನ- ಕಾರಣವೇನು ಗೊತ್ತಾ? VIDEO

ಮಂಗಳೂರಿನಲ್ಲಿ 38 ಶ್ರೀಲಂಕಾ ಪ್ರಜೆಗಳ ಬಂಧನ- ಕಾರಣವೇನು ಗೊತ್ತಾ? VIDEO


ಮಂಗಳೂರು; ಮಂಗಳೂರಿನ ಪೊಲೀಸರು ಇಂದು 38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದಾರೆ.ಶ್ರೀಲಂಕಾದಿಂದ ಕೆನಡಾಗೆ ಮಾನವ ಕಳ್ಳಸಾಗಣೆ ನಡೆಸುತ್ತಿದ್ದ ಬೃಹತ್ ಜಾಲವೊಂದು ಪತ್ತೆಯಾಗಿದ್ದು ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ  ಮಂಗಳೂರು ಪೊಲೀಸರು  38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಶ್ರೀಲಂಕಾದಿಂದ  39 ಪ್ರಜೆಗಳು ಕೆನಡಗೆ ಪ್ರಯಾಣಿಸಿದ್ದರು. ಶ್ರೀಲಂಕಾದ ಏಜೆಂಟನೊಬ್ಬ 5 ಲಕ್ಷದಿಂದ 10 ಲಕ್ಷದವರೆಗೆ ಹಣವನ್ನು ಪ್ರತಿಯೊಬ್ಬರಿಂದ ಪಡೆದುಕೊಂಡು ಕೆನಡಾ ದೇಶಕ್ಕೆ ಕಳುಹಿಸಲು ಯೋಚಿಸಿದ್ದನು. ಅದರಂತೆ ಆತ ಶ್ರೀಲಂಕಾದಿಂದ ಬೋಟ್ ಮುಖಾಂತರ ತಮಿಳುನಾಡು ರಾಜ್ಯದ ತೂತುಕುಡಿ ಎಂಬ ಸ್ಥಳಕ್ಕೆ 39 ಮಂದಿಯನ್ನು ಕಳುಹಿಸಿದ್ದನು.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಾರಣದಿಂದ ತಪಾಸಣೆ ಜಾಸ್ತಿ ಇದ್ದ ಕಾರಣ ಇವರನ್ನು ಬೆಂಗಳೂರು ಮೂಲಕ ಮಂಗಳೂರಿಗೆ ಕಳುಹಿಸಲಾಗಿದೆ. ಹೀಗೆ ಬಂದ 39 ಮಂದಿ ಮಂಗಳೂರಿನ ಲಾಡ್ಜ್ ಮತ್ತು ಎರಡು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ತಿಂಗಳಿನಿಂದ ಅಕ್ರಮವಾಗಿ ವಾಸವಿದ್ದ 38 ಶ್ರೀಲಂಕಾ ಪ್ರಜೆಗಳನ್ನು ಇಂದು ಬಂಧಿಸಲಾಗಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

 

Ads on article

Advertise in articles 1

advertising articles 2

Advertise under the article

holige copy 1.jpg WhatsApp Image 2021-12-03 at 17.07.27.jpeg CLICK-HERE