ಸ್ನೇಹಿತರೊಂದಿಗೆ ಲೈಂಗಿಕ ಸಹಕರಿಸು ಎಂದು ಹಿಂಸಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ದೂರು
Friday, June 11, 2021
ಬೆಂಗಳೂರು: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕೆಂದು ಒತ್ತಾಯಿಸಿ ಹಿಂಸೆ ನೀಡುತ್ತಿದ್ದ ಪತಿಯ ವಿರುದ್ಧ ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬನಶಂಕರಿಯ ಈ ಯುವತಿಯು 2018ರಲ್ಲಿ ಬಿಟಿಎಂ ಲೇಔಟ್ ನಿವಾಸಿ ವಸೀಂ ಶರೀಫ್ ಎಂಬಾತನನ್ನು ಮದುವೆವಾಗಿದ್ದಳು. ಆದರೆ ಆ ಪತಿ ಮಹಾಶಯ ಪತ್ನಿಗೆ ಕಪಲ್ ಸೆಕ್ಸ್ಗೆ ಒತ್ತಾಯಿಸಲು ಆರಂಭಿಸಿದ್ದಾನೆ. ಮೊದಲಿಗೆ ಆರೋಪಿ ಪತಿ ವಸೀಂ, ಪತ್ನಿಯನ್ನು ಊಟಿ, ಗೋವಾಗೆ ಕರೆದೊಯ್ದು ಪತ್ನಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಹಿಂಸಿಸಿದ್ದಾನೆ. ಅದಲ್ಲದೆ ಮನೆಯಲ್ಲೇ ಗೆಳೆಯರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ಆತ, ಪತ್ನಿಯ ಕೈಯಲ್ಲೇ ಡ್ರಿಂಕ್ಸ್ ಸಪ್ಲೈ ಮಾಡಿಸಿ ಸ್ನೇಹಿತರ ಜೊತೆ ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದನಂತೆ.
ಪತ್ನಿಗೆ ಎರಡು ಬಾರಿ ಅಬಾರ್ಷನ್ ಮಾಡಿಸಿರುವ ಆರೋಪಿ ವಸೀಂ, ಮೂರನೇ ಬಾರಿ ಹೆಣ್ಣು ಮಗು ಜನನವಾದಾಗ ಮಗುವಿಗೆ ನೀಲಿ ಕಣ್ಣಿದೆ ಎಂಬ ಕಾರಣಕ್ಕೆ ಪತ್ನಿಯನ್ನು ಮನೆಯಿಂದ ಹೊರಹಾಕಿ ವಿಕೃತಿ ಮೆರೆದಿದ್ದಾನೆ ಎಂದು ಕೂಡಾ ಪತ್ನಿ ದೂರು ನೀಡಿದ್ದಾಳೆ. ಸದ್ಯ ತನಗಾದ ಅನ್ಯಾಯದ ಬಗ್ಗೆ ನೊಂದ ಮಹಿಳೆ ಪೂರ್ವ ವಲಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿರುವ ದೂರಿನ ಅನ್ವಯ ಆರೋಪಿ ಸೈಕೋ ಪತಿರಾಯನ ಮಾಹಿತಿ ಕಲೆಹಾಕಿರುವ ಪೊಲೀಸರು ವಿಚಾರಣೆಗೆ ಹಾಜರಾಗುವುದಕ್ಕೆ ನೋಟಿಸ್ ಕೊಡಲು ಸಿದ್ದತೆ ನಡೆಸಿದ್ದಾರೆ.