ನಟಿ ಶ್ರೀದೇವಿ ಮಗಳು ಜಾಹ್ನವಿಗೆ ಸಿಕ್ಕಿದೆ ಭರ್ಜರಿ ಆಫರ್ !
Friday, June 11, 2021
ನಟಿ ಶ್ರೀದೇವಿ ಮಗಳು ಜಾಹ್ನವಿಗೆ ಇದೀಗ ಒಂದರ ನಂತರ ಒಂದರಂತೆ ಅವಕಾಶಗಳ ಸುರಿಮಳೆಯೇ ಬಂದಿದ್ದು, ತೆಲುಗಿನ ಮೂವರು ಟಾಪ್ ಹೀರೋಗಳು, ದೊಡ್ಡ ಬಜೆಟ್ನ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಆಫರ್ ಬಂದಿದೆಯಂತೆ.
ಮಹೇಶ್ ಬಾಬು, ರಾಮ್ಚರಣ್ ತೇಜ ಮತ್ತು ಜ್ಯೂನಿಯರ್ ಎನ್ಟಿಆರ್ ಅಭಿನಯದ ಹೊಸ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವಂತೆ ಜಾಹ್ನವಿಯನ್ನು ಕೇಳಲಾಗಿದೆಯಂತೆ. ವಿಶೇಷ ಅಂದ್ರೆ ಈ ಮೂರೂ ಚಿತ್ರಗಳನ್ನು ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿದ್ದು, ದೊಡ್ಡ ನಿರ್ದೇಶಕರೇ ಈ ಚಿತ್ರಗಳ ಹಿಂದಿದ್ದಾರಂತೆ.