ರಾತ್ರಿ ಮನೆ ಬಿಟ್ಟು ಬೇರೆ ಕಡೆ ಹೋಗುತ್ತಿದ್ದ ಪತ್ನಿ; ತಂದೆ, ಮಗ ಸೇರಿ ಮಾಡಿದರು ಕೊಲೆ
Friday, June 11, 2021
ಬಾಗಲಕೋಟೆ: ತಂದೆಯೊಂದಿಗೆ ಸೇರಿ ತಾಯಿಯನ್ನು ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತುಂಗಳ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಹನಮಂತ ವಡ್ರಾಳ (40) ಕೊಲೆಯಾದ ಮಹಿಳೆ. ಪತ್ನಿಯು ನಿತ್ಯ ಕಿರುಕಳ ನೀಡುತ್ತಿದ್ದಳು, ಜೀವ ಬೆದರಿಕೆ ಹಾಕುತ್ತಿದ್ದಳು. ಅಲ್ಲದೆ ರಾತ್ರಿ ಮನೆ ಬಿಟ್ಟು ಬೇರೆ ಕಡೆಗೆ ಹೋಗುತ್ತಿದ್ದಳು ಎಂಬ ಕಾರಣಕ್ಕೆ ಅಪ್ರಾಪ್ತ ಮಗನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರು ತನಿಖೆ ನಡೆಸಿದಾಗ, ಪತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಅಪ್ರಾಪ್ತ ಬಾಲಕ ಹಾಗೂ ತಂದೆಯನ್ನು ಬಂಧಿಸಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.