SSLC ಪರೀಕ್ಷೆ ದಿನಾಂಕ ಪ್ರಕಟ- ಎರಡು ದಿನಗಳ ಪರೀಕ್ಷೆ (Video)
Monday, June 28, 2021
ಜುಲೈ 19 ಮತ್ತು ಜುಲೈ 22 ರಂದು ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜು.19ರಂದು ಕೋರ್ ವಿಷಯಗಳ ಪರೀಕ್ಷೆ ಮತ್ತು ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ 73,066 ಪರೀಕ್ಷೆ ಕೇಂದ್ರಗಳಿವೆ. ಕಳೆದ ಬಾರಿ ಆರು ದಿನಗಳ ಪರೀಕ್ಷೆ ನಡೆಸಿದ್ದೆವು. ಈ ಬಾರಿ ಎರಡು ದಿನ ನಡೆಯಲಿದೆ ಎಂದು ಹೇಳಿದರು.
3 ವಿಷಯಗಳಿಗೆ ಒಂದು ಪರೀಕ್ಷೆ ಇರುತ್ತದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಒಂದು ದಿನ ನಡೆಯಲಿದೆ. ಈ ಪರೀಕ್ಷೆ ಜುಲೈ 19ರಂದು ನಡೆಯಲಿದೆ. ಉಳಿದ ಭಾಷಾ ವಿಷಯಗಳ ಪರೀಕ್ಷೆ ಜುಲೈ 22ರಂದು ನಡೆಯಲಿದೆ. ಎರಡು ದಿನಗಳಲ್ಲಿ ಬೆಳಗ್ಗೆ 10:30ರಿಂದ 1:30ರವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ಹೇಳಿದರು.
Posted by Suresh Kumar S on Monday, June 28, 2021