ಲಿಂಬೆ ಶರಬತ್ತು ಮಾರುತ್ತಿದ್ದ ಯುವತಿ ತನ್ನದೇ ಜಿಲ್ಲೆಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಸಾಧನೆ
Monday, June 28, 2021
ತಿರುವನಂತಪುರ: ಸಾಧಿಸುವ ಛಲವೊಂದಿದ್ದರೆ ಎಂಥಹ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಯುವತಿಯೇ ಸಾಕ್ಷಿ. ಜೀವನ ನಡೆಸಲು ರಸ್ತೆ ಬದಿಯಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
18 ವರ್ಷಕ್ಕೇ ಮನೆಯವರ ವಿರೋಧದ ನಡುವೆ ಪ್ರೀತಿಸಿದವನನ್ನೇ ಮದುವೆಯಾದ ಕೇರಳದ ವರ್ಕಲಾ ನಗರ ನಿವಾಸಿ ಆ್ಯನಿ ಶಿವ ಗಂಡನಿಂದ, ಮನೆಯವರಿಂದ ದೂರವಾಗಿ, ಹೊಟ್ಟೆ ಪಾಡಿಗಾಗಿ ವರ್ಕಲಾದಲ್ಲಿ ಲಿಂಬೆ ಶರಬತ್ತು, ಐಸ್ ಕ್ರೀಮ್ ಮಾರುತ್ತಿದ್ದರು. ಇದೀಗ ಆಕೆ ವರ್ಕಲಾ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾರೆ.
ಇದೀಗ 31 ವರ್ಷ ವಯಸ್ಸಿನ ಆ್ಯನಿ ಶಿವ, ಕಾಂಜಿರಾಮ್ಕುಲಂ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುವ ಸಮಯದಲ್ಲಿ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರು. ಮಗುವಾದ ಬಳಿಕ ಗಂಡ ದೂರವಾಗಿದ್ದ. ಬಳಿಕ ಮನೆಗೆ ಮರಳಲು ಪ್ರಯತ್ನಿಸಿದರೂ, ಕುಟುಂಬವು ಅವರನ್ನು ಸ್ವೀಕರಿಸಲಿಲ್ಲ. ತನ್ನ ಆರು ತಿಂಗಳ ಮಗು ಶಿವಸೂರ್ಯನೊಂದಿಗೆ ಅಜ್ಜಿಯ ಮನೆಯಲ್ಲಿ ಶೆಡ್ ಒಂದರಲ್ಲಿ ಕೆಲ ಕಾಲ ಉಳಿದುಕೊಂಡಿದ್ದರು. ಬಳಿಕ ಆದಾಯಕ್ಕಾಗಿ ಕೆಲಸ ಮಾಡಬೇಕು ಎಂದು ಅಲ್ಲಿಂದ ವರ್ಕಲಾಗೆ ತೆರಳಿದ್ದರು.
ವರ್ಕಲಾ ಶಿವಗಿರಿ ಆಶ್ರಮದ ಸ್ಟಾಲ್‌ಗಳಲ್ಲಿ ನಾನು ನಿಂಬೆ ಪಾನಕ, ಐಸ್‌ಕ್ರೀಮ್, ಕೈಯಿಂದ ತಯಾರಿಸಿದ ಕರಕುಶಲ ವಸ್ತುಗಳಿಗೆ ಮಾರಾಟ ಮಾಡುವಂತಹ ಅನೇಕ ಸಣ್ಣ ಉದ್ಯಮಗಳನ್ನು ಪ್ರಯತ್ನಿಸಿದ್ದರು. ಆದರೆ ಎಲ್ಲವೂ ವಿಫಲವಾಯಿತು. ಆ
ಈ ಸಂದರ್ಭ ಓರ್ವ ವ್ಯಕ್ತಿ ಪೊಲೀಸ್ ಪರೀಕ್ಷೆ ಬರೆಯಲು ಸೂಚಿಸಿ ಹಣಕಾಸಿನ ಸಹಾಯ ಮಾಡಿದ್ದರಂತೆ. ತನ್ನ ಸಂಕಷ್ಟ ಹಾಗೂ ಸಾಧನೆಯ ಬಗ್ಗೆ ಆ್ಯನಿ ಶಿವ ಫೇಸ್‌ಬುಕ್ ಪೋಸ್ಟ್ ನಲ್ಲಿ ಬರೆದಿದ್ದರು. ಇದನ್ನು ಅನೇಕರು ಹಂಚಿಕೊಂಡ ಬಳಿಕ ನಾನು ಪಡೆಯುತ್ತಿರುವ ಬೆಂಬಲದಿಂದ ಸಂತೋಷವಾಗುತ್ತಿದೆ ಎಂದು ಆ್ಯನಿಶಿವ ಹೇಳುತ್ತಾರೆ.