
ಅಂಗಡಿಯೊಳಗಡೆ ನುಗ್ಗಿದ ಮಹಿಳೆಯರಿಂದ ಮಾಲೀಕನಿಗೆ ಚಪ್ಪಲಿಯೇಟು...
ಲಖನೌ: ಮಹಿಳೆಯರು ಅಂಗಡಿಯೊಳಗೆ ನುಗ್ಗಿ ಅಂಗಡಿ ಮಾಲೀಕನಿಗೆ ಚಪ್ಪಲಿ ಏಟು ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ.
ಈ ರೀತಿಯ ಹಲ್ಲೆ ನಡೆಸಿದವರು ಆತನ ಹೆಂಡತಿಯೇ ಎಂದು ಹೇಳಲಾಗಿದೆ. ಫಿರೋಜಾಬಾದ್‌ನ ಶಿಕೋಹಾಬಾದ್ ನಗರದ ಅಂಗಡಿಯೊಳಗೆ ಇತ್ತೀಚೆಗೆ ಮಹಿಳೆಯರು ನುಗ್ಗಿ ಅಲ್ಲಿದ್ದ ಮಾಲೀಕನಿಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ನಮ್ಮಿಬ್ಬರ ಮದುವೆ 2012ರಲ್ಲಿ ಆಗಿತ್ತು ಆದರೆ ಆತ ನನಗೆ ಸಾಕಷ್ಟು ಹಿಂಸೆ ಕೊಟ್ಟು ಮನೆಯಿಂದ ಹೊರಗಡೆ ಹಾಕಿದ್ದ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಆತ ಬೇರೆ ಹಳ್ಳಿಗೆ ಹೋಗಿ ವ್ಯಾಪಾರ ಮಾಡಿ ಬೇರೊಬ್ಬಳನ್ನು ಮದುವೆಯಾಗಿದ್ದಾನೆ ಎಂದಿದ್ದಾಳೆ.
ಮೊದಲನೇ ಹೆಂಡತಿ ಇರುವಾಗಲೇ, ಆಕೆಗೆ ಮೋಸ ಮಾಡಿದ ಎನ್ನುವ ಕಾರಣಕ್ಕೆ ಆತನ ಮೊದಲನೇ ಹೆಂಡತಿ ಸೇರಿ ಅನೇಕ ಮಹಿಳೆಯರು ಆತನಿಗೆ ಸರಿಯಾಗಿ ಏಟು ಕೊಟ್ಟಿದ್ದಾರೆ. ಈ ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.