ಹನಿಮೂನ್ ನಲ್ಲಿ ಗೊತ್ತಾಯ್ತು ಗಂಡ 'ಗಂಡಸಲ್ಲ' : ಮುಂದೇನಾಯ್ತು?
Friday, June 18, 2021
ಲಂಡನ್: ಪ್ರೀತಿಸಿ ಮದುವೆಯಾಗಿ ಗಂಡನೊಂದಿಗೆ ಹನಿಮೂನ್ಗೆ ತೆರಳಿದ್ದ ಯುವತಿಗೆ ತನ್ನ ಪತಿ ಗಂಡಸಲ್ಲ ಬದಲಾಗಿ ಟ್ರಾನ್ಸ್ಜೆಂಡರ್ ಎನ್ನುವ ವಿಚಾರ ತಿಳಿದುಬಂದಿರುವ ಘಟನೆ ಬ್ರಿಟನ್ನಲ್ಲಿ ನಡೆದಿದೆ.
ಬ್ರಿಟನ್ನ ಜೆಕ್(33) ಅಮೆರಿಕದ ಹಾರ್ವಿ (30) 2018ರಲ್ಲಿ ಈ ಜೋಡಿ ಮದುವೆಯಾಗಿತ್ತು. ಮದುವೆಯಾಗಿ ಹನಿಮೂನ್ ಗೆ ತೆರಳಿದ ಸಂದರ್ಭ ಗೊತ್ತಾಯ್ತು ಜೆಕ್ ಸಂಪೂರ್ಣ ಪುರುಷನಲ್ಲ ಎನ್ನುವ ವಿಚಾರ. ಗಂಡನ ವಿಚಾರ ತಿಳಿದ ನಂತರ ಬೇಸರ ಮಾಡಿಕೊಳ್ಳದ ಹಾರ್ವಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದಾಳೆ. ತಾನು ದುಡಿದು ಉಳಿಸಿದ್ದ 45 ಸಾವಿರ ಪೌಂಡ್ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಳೆ. ನಂತರ ಅವಳಾಗಿ ಬದಲಾದ ಆತನಿಗೆ ರಾಯನಾ ಎಂದು ಹೆಸರಿಟ್ಟಿದ್ದಾಳೆ. ಆಕೆಗೆ ಮೇಕಪ್ ಮಾಡುವುದು, ಡ್ರೆಸ್ ತೊಡಿಸುವುದು ಹೀಗೆ ಸಂತೋಷದಿಂದ ಜೀವನ ಕಳೆಯಲಾರಂಭಿಸಿದ್ದಾರೆ. ಇದೀಗ ಹಾರ್ವಿ ರಾಯನಾ ಜತೆ ಮದುವೆ ಆಗುವ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಈ ದಂಪತಿಯ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಇದೀಗ ಆ ಯುವತಿ ತನ್ನ ಗಂಡನ ಸ್ತ್ರೀ ರೂಪವನ್ನು ಮತ್ತೊಮ್ಮೆ ಮದುವೆಯಾಗಲು ಸಿದ್ಧಳಾಗಿರುವುದಾಗಿ ಹೇಳಲಾಗಿದೆ.