-->

ಕೊರೋನಾ ರೋಗಿಯ ಜೊತೆ  ಬಂದಿದ್ದ ಯುವತಿಗೆ   ಆಂಬ್ಯುಲೆನ್ಸ್​ ಚಾಲಕ ಮಾಡಿದ್ದೇನು?

ಕೊರೋನಾ ರೋಗಿಯ ಜೊತೆ ಬಂದಿದ್ದ ಯುವತಿಗೆ ಆಂಬ್ಯುಲೆನ್ಸ್​ ಚಾಲಕ ಮಾಡಿದ್ದೇನು?

 ಕೊಲ್ಲಂ: ಕೊರೋನಾ ರೋಗಿಯ ಜೊತೆ ಆಸ್ಪತ್ರೆಗೆ ಬಂದಿದ್ದ ಯುವತಿಯ ಮೇಲೆ  ಆಂಬ್ಯುಲೆನ್ಸ್​ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

 ಆರೋಪಿ ಆಂಬ್ಯುಲೆನ್ಸ್​ ಚಾಲಕನನ್ನು ಸಾಜಿ ಕುತ್ತನ್ ಎಂದು ಗುರುತಿಸಲಾಗಿದೆ. ಕೋವಿಡ್​ನಿಂದಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಜೂನ್​ 3ರಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕರೊನಾ ರೋಗಿಗೆ ಬೆಂಬಲವಾಗಿ ಆಂಬ್ಯುಲೆನ್ಸ್​ನಲ್ಲಿ ರೋಗಿಯ ಸಂಬಂಧಿ ಯುವತಿಯೊಬ್ಬಳು ಜತೆಯಾಗಿ ತೆರಳಿದ್ದರು. ರೋಗಿಯನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅಲ್ಲಿಂದ ವಾಪಸ್ಸಾಗುವ ಮುನ್ನ ಆಸ್ಪತ್ರೆಯ ಒಳಗಡೆ ಹೋದ ಸಾಜಿ ಕುತ್ತನ್​ ಗ್ಲೌಸ್​ ಹಾಕಿಕೊಂಡು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
 ಈ ಸಂಬಂಧ ಸಂತ್ರಸ್ತ ಯುವತಿ ಕೇರಳ ಮುಖ್ಯಮಂತ್ರಿ ಕಚೇರಿಗೆ ಲಿಖಿತ ದೂರು ದಾಖಲಿಸಿದ್ದು, ಆರೋಪಿ ಸಾಜಿ ಕುತ್ತನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99